

ನವದೆಹಲಿ: ದುಬೈ ಏರ್ಪೋರ್ಟ್ ರನ್ವೇ ಕ್ರಿಸ್ಮಸ್ ಟ್ರೀ ಮಾದರಿಯ ಲೈಟಿಂಗ್ನಲ್ಲಿ ಅಲಂಕೃತಗೊಂಡಿದೆ ಎಂಬ ಫೋಟೋ ಶೀರ್ಷಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದಾರಿತಪ್ಪಿಸುವಂತಹ ಫೇಸ್ಬುಕ್ ಪೋಸ್ಟ್ ಅನ್ನು ಬಹಳಷ್ಟು ಜನ ಲೈಕ್ ಮಾಡಿದ್ದು, ಶೇರ್ ಕೂಡ ಮಾಡಿಕೊಂಡಿದ್ದಾರೆ.
ಫೋಟೋವನ್ನು ಇಮೇಜ್ ರಿವರ್ಸ್ ಸರ್ಚ್ಗೆ ಒಳಪಡಿಸಿದಾಗ ಅದು ಐರ್ಲೆಂಡ್ನ ಶನಾನ್ ಏರ್ಪೋರ್ಟ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪತ್ತೆ ಆಗಿದೆ. ಅದು ಕ್ರಿಸ್ಮಸ್ ಜಾಹೀರಾತು ಅಭಿಯಾನದ ಭಾಗವಾಗಿ ವಿಮಾನ ನಿಲ್ದಾಣವನ್ನು ಶೃಂಗರಿಸಿದ್ದ ಸಂದರ್ಭದ ಫೋಟೋವಾಗಿತ್ತು. ಫೋಟೋ ಮೇಲೆ "ಶನಾನ್ ಏರ್ಪೋರ್ಟ್ ಲಾಂಚಸ್ ಫೆಸ್ಟಿವ್ ಕ್ಯಾಂಪೇನ್..." ಎಂಬ ಶೀರ್ಷಿಕೆಯೂ ಇದೆ.
ಶನಾನ್ ಗ್ರೂಪ್ ಕೂಡ ಇದನ್ನು ಖಾತರಿಪಡಿಸಿದ್ದು, ಕಠಿಣ ವರ್ಷವೊಂದು ಉರುಳಿ ಹೋಗುತ್ತಿದ್ದು, ಹೊಸ ವರ್ಷ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಐರ್ಲೆಂಡ್ ಸಾಂಟಾನನ್ನು ಸ್ವಾಗತಿಸಲು ಈ ರೀತಿ ಪರಿಕಲ್ಪನೆಯೊಂದಿಗೆ ವಿಮಾನ ನಿಲ್ದಾಣವನ್ನು ಬೆಳಗಲಾಗಿದೆ ಎಂದು ತಿಳಿಸಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..