FACT CHECK | VIDEO |ತಮಿಳು ನಟ ಅಜಿತ್​ ಕುಮಾರ್​ ಬೈಕ್​ ಅಪಘಾತದ ವಿಡಿಯೋ ದೃಶ್ಯದ ಸತ್ಯ ಘಟನೆ ಏನು?

acident feb 23 2020
Published on

ನವದೆಹಲಿ: ಶೂಟಿಂಗ್ ವೇಳೆ ತಮಿಳು ನಟ ಅಜಿತ್ ಕುಮಾರ್ ಅಪಘಾತಕ್ಕೀಡಾಗಿದ್ದಾರೆ ಎನ್ನುವ ವಿಡಿಯೋ ಫೇಸ್​ಬುಕ್​ನಲ್ಲಿ ವೈರಲ್​ ಆಗಿದೆ.

ತಮಿಳು ಕಿಕ್ಯಾಸ್​ ಹಾಗೂ ಕಾಲಿವುಡ್​ ನ್ಯೂಜ್​ ಎನ್ನುವ ತಮಿಳು ಫೇಸ್​ಬುಕ್​ ಪುಟಗಳಲ್ಲಿ ಅಪಘಾತದ ದೃಶ್ಯ ಇರುವ ವಿಡಿಯೋ ಅಪ್​ಲೋಡ್​ ಆಗಿದೆ. ವ್ಯಕ್ತಿಯೊಬ್ಬರು ಹೆಲ್ಮೆಟ್​ ಧರಿಸಿ ಸಮುದ್ರದ ಅಂಚಿನಲ್ಲಿ ಬೈಕ್​ ಚಲಾಯಿಸಿಕೊಂಡು ಬರುತ್ತಿರುವವಾಗ ರಸ್ತೆ ಅಂಚಿಗೆ ಬಂದು ಬೈಕ್​ ಸಮೇತ ದೋಣಿಗೆ ಬೀಳುತ್ತಾರೆ. ಶೂಟಿಂಗ್​ ವೇಳೆ ನಟ ಅಜಿತ್​ ಕುಮಾರ್​ ಅಪಘಾತಕ್ಕೆ ಉತ್ತಾಗಿ ಗಾಯಗೊಂಡಿದ್ದಾರೆ ಎಂದು ಶೀರ್ಷಿಕೆ ಬರೆಯಲಾಗಿದೆ.

ಫೇಸ್​ಬುಕ್​ನಲ್ಲಿ ವೈರಲ್​ ಆದ ವಿಡಿಯೋ ನಕಲಿ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ. ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಸ್ಟ್ ಅಂದಾಜು 7 ವರ್ಷಕ್ಕಿಂತ ಹಳೆಯದು ಎಂಬುದನ್ನು ಪತ್ತೆ ಮಾಡಿದೆ. ಅಲ್ಲದೆ ಈ ವಿಡಿಯೋ ಭಾರತದ್ದಲ್ಲ. ಅಲ್ಲ ವಿದೇಶಿ ಮೂಲದ್ದು ಎಂಬುದು ಕೂಡ ಪತ್ತೆ ಮಾಡಿದೆ.

ತಮಿಳು ನಟ ಅಜಿತ್ ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರೀಕರಣದ ವೇಳೆ ಅಪಘಾತಕ್ಕೆ ತುತ್ತಾಗಿದ್ದರು. ಈ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ವೈರಲ್​ ಆದ ವಿಡಿಯೋಗೂ ಅಪಘಾತಕ್ಕೂ ಯಾವುದೇ ಸಂಬಂಧ ಇಲ್ಲ.
ಈ ವಿಡಿಯೋ ಫ್ರೆಂಚ್​ ಮೂಲದ್ದು: ವೈರಲ್​ ಆದ ವಿಡಿಯೋ 2012ರಲ್ಲಿ ಯ್ಯೂಟೂಬ್​ಗೆ ಅಪ್​ಲೋಡ್​ ಮಾಡಲಾಗಿದೆ. ಯಮಹಾ ಕಂಪನಿಯ ಎಫ್​ಜೆಆರ್​ 1300 ಸಿಸಿ ಮೋಟಾರ್​ ಬೈಕ್​ ಅನ್ನು ಫ್ರೆಂಚ್​ ನಿಯತಕಾಲಿಕೆಯ ವರದಿಗಾರ ಬೆಂಜಮಿನ್​ ಎಂಬಾತ ಪರೀಕ್ಷೆ ನಡೆಸುವ ವೇಳೆ ಅಪಘಾತಕ್ಕೆ ತುತ್ತಾಗಿ ದೋಣಿಗೆ ಬೀಳುತ್ತಾರೆ. ಅಪಘಾತದಲ್ಲಿ ಬೆಂಜಮಿನ್​ ಅವರಿಗೆ ಸಣ್ಣಪುಟ್ಟ ಗಾಯಗಳಾಗುತ್ತವೆ. ಹೀಗಾಗಿ ನಟ ಅಜಿತ್​ ಅಪಘಾತಕ್ಕೂ ಹಾಗೂ ವೈರಲ್​ ಆದ ವಿಡಿಯೋಗೂ ಯಾವುದೇ ಸಂಬಂಧ ಇಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಪತ್ತೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net