ಹುಡುಗಿಯರ ಹಾಸ್ಟೆಲ್​ ಚರಂಡಿಯಲ್ಲಿ ನೂರಾರು ಕಾಂಡೋಮ್‌ಗಳು ಪತ್ತೆ! ವೈರಲ್​ ಸುದ್ದಿಯ ಅಸಲಿ ಸತ್ಯ ಇಲ್ಲಿದೆ... Condoms

Condoms
Published on

ನವದೆಹಲಿ: ಇತ್ತೀಚೆಗೆ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು. ಆ ವಿಡಿಯೋಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಹುಡುಗಿಯರ ಹಾಸ್ಟೆಲ್‌ನ ಚರಂಡಿಯಿಂದ ನೂರಾರು ಕಾಂಡೋಮ್‌ಗಳು ( Condoms ) ಹೊರಬರುತ್ತಿವೆ ಎಂದು ಹೇಳಲಾಗಿತ್ತು. ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸತ್ಯಾಸತ್ಯತೆಯನ್ನು ಪರಿಶೀಲಿಸದೇ ವಿದ್ಯಾರ್ಥಿನಿಯರ ಮೇಲೆ ಕೆಟ್ಟ ಪದಗಳಲ್ಲಿ ಆಕ್ರೋಶ ಹೊರಹಾಕಿದ್ದರು.

ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೇರಲೆಂದು ತಮ್ಮ ಮಕ್ಕಳ ಮೇಲೆ ನಂಬಿಕೆ ಇಟ್ಟು ದೊಡ್ಡ ನಗರಗಳಿಗೆ ಕಳುಹಿಸಿಕೊಟ್ಟರೆ, ಈ ರೀತಿ ಮಾಡಬಾರದ ಕೆಲಸವನ್ನು ಮಾಡಿ ಪಾಲಕರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ. ಹುಡುಗಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಕಾಂಡೋಮ್​ಗಳ ರಾಶಿಯನ್ನು ನೋಡಿದರೆ, ಅದು ಹಾಸ್ಟೆಲ್ ಅಲ್ಲ, ಅದೊಂದು ವೇಶ್ಯಾಗೃಹ ಎನಿಸುತ್ತಿದೆ. ಇದೊಂದು ಕಾಂಡೋಮ್ ಡ್ರೈನ್ ಹಗರಣ ಎಂದೆಲ್ಲ ನೆಟ್ಟಿಗರು ವಿಡಿಯೋ ಕೆಳಗೆ ಕಾಮೆಂಟ್‌ ಮಾಡಿದ್ದಾರೆ.

ಮೊದಲ ವಿಡಿಯೋದಲ್ಲಿ, ಕೆಲವು ಸುದ್ದಿ ವರದಿಗಾರರು ತಮ್ಮ ಕ್ಯಾಮೆರಾವನ್ನು ಚರಂಡಿಯೊಳಗೆ ಜೂಮ್ ಮಾಡಿ ನೋಡಿದಾಗ, ಚರಂಡಿಯಲ್ಲಿ ಹೆಚ್ಚಿನ ಸಂಖ್ಯೆಯ ಕಾಂಡೋಮ್‌ಗಳು ಬಿದ್ದಿರುವುದು ಕಂಡುಬಂದಿದೆ. ಅದನ್ನು ತೋರಿಸುತ್ತಾ, ನೀವಿಲ್ಲಿ ನೋಡಬಹುದು, ಇದು ಹಾಸ್ಟೆಲ್‌ನ ನೆಲ ಮಹಡಿಯಲ್ಲಿರುವ ಒಳಚರಂಡಿ ಕೊಠಡಿ. ನಿನ್ನೆ ರಾತ್ರಿ, ಕ್ಲೀನರ್‌ಗಳು ಮುಚ್ಚಳವನ್ನು ತೆರೆದಾಗ, ಒಳಗೆ ಬಹಳಷ್ಟು ಬಳಸಿದ ಕಾಂಡೋಮ್‌ಗಳು ಕಂಡುಬಂದವು. ಇದು ಹುಡುಗಿಯರ ಪಿಜಿಯ ಪಕ್ಕದಲ್ಲಿದೆ ಎಂದು ಹೇಳುತ್ತಾರೆ.

Condoms 1

ಫೇಸ್​ಬುಕ್​ ಪೋಸ್ಟ್​

ಇನ್ನೊಂದು ವಿಡಿಯೋದಲ್ಲಿ ನೂರಾರು ಕಾಂಡೋಮ್‌ಗಳು ಚರಂಡಿಯಲ್ಲಿ ಮತ್ತು ಅದರ ಸುತ್ತಮುತ್ತ ಬಿದ್ದಿರುವುದನ್ನು ತೋರಿಸಲಾಗಿದೆ. ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿ, ದೆಹಲಿಯ ಪಿಜಿ ಹುಡುಗಿಯರ ಹಾಸ್ಟೆಲ್‌ನ ಚರಂಡಿ ಬ್ಲಾಕ್​ ಆಗಿದೆ. ಅದರ ಫಲಿತಾಂಶ ನಿಮ್ಮ ಮುಂದೆ ಇದೆ. ಏನನ್ನೂ ಹೇಳಬೇಡಿ... ಏನನ್ನೂ ಹೇಳಬೇಡಿ... ಎಂದು ಫೇಸ್​ಬುಕ್​ ಬಳಕೆದಾರ ಬರೆದುಕೊಂಡಿದ್ದಾನೆ.

ಫ್ಯಾಕ್ಟ್​ಚೆಕ್​ನಲ್ಲಿ ಅಸಲಿ ಸಂಗತಿ ಬಯಲು

ಆದಾಗ್ಯೂ, ಆಜ್ ತಕ್ ಸುದ್ದಿ ಮಾಧ್ಯಮ ಈ ಕುರಿತು ಸತ್ಯಾನ್ವೇಷಣೆ ಅಥವಾ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಆಗಿರುವ ಎರಡೂ ವಿಡಿಯೋಗಳು ದೆಹಲಿಯಲ್ಲಿ ನಡೆದ ಯಾವುದೇ ಘಟನೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಹಿಡಿದಿದೆ. ಮೊದಲ ವಿಡಿಯೋ AI ಅಂದರೆ, ಕೃತಕ ಬುದ್ಧಿಮತ್ತೆ ರಚಿತವಾಗಿದ್ದರೆ, ಎರಡನೇ ವಿಡಿಯೋ ನೈಜೀರಿಯಾಗೆ ಸಂಬಂಧಿಸಿದ್ದಾಗಿದೆ.

ವಿಡಿಯೋ 1

ವಿಡಿಯೋದಲ್ಲಿ "VN Creator" ಎಂಬ ವಾಟರ್‌ಮಾರ್ಕ್ ಅನ್ನು ಕಾಣಬಹುದು. ಈ ಮಾಹಿತಿಯನ್ನು ಬಳಸಿಕೊಂಡು, "VN Creator" ಎಂಬ ಫೇಸ್‌ಬುಕ್ ಪುಟವು ಅಕ್ಟೋಬರ್ 27 ರಂದು ವಿಡಿಯೋವನ್ನು ಪೋಸ್ಟ್ ಮಾಡಿದೆ. ಹತ್ತಿರದಿಂದ ಪರಿಶೀಲಿಸಿದಾಗ, ಬಳಕೆದಾರರು ಉದ್ದೇಶಪೂರ್ವಕವಾಗಿ ತಮ್ಮದೇ ಆದ ಲೋಗೋ ಮತ್ತು ಬಿಳಿ ಪಟ್ಟಿಯೊಂದಿಗೆ ಸೋರಾ ಲೋಗೋವನ್ನು ಮರೆಮಾಡಿರುವಂತೆ ತೋರುತ್ತದೆ. ಸೋರಾ ಎಂಬುದು AI ವೀಡಿಯೊ ರಚನೆ ಸಾಧನವಾಗಿದೆ. ಇದೇ ಪುಟದಲ್ಲಿ ಮತ್ತೊಂದು ವಿಡಿಯೋ ಪತ್ತೆಯಾಯಿತು. ಪುಣೆಯಲ್ಲಿರುವ ಬಾಲಕಿಯರ ಹಾಸ್ಟೆಲ್ ಮತ್ತು ಬಾಲಕರ ಹಾಸ್ಟೆಲ್‌ನ ಒಳಚರಂಡಿ ಟ್ಯಾಂಕ್‌ಗಳಲ್ಲಿ ಕಾಂಡೋಮ್‌ಗಳು ಕಂಡುಬಂದಿವೆ ಎಂದು ಹೇಳುವ AI ವಿಡಿಯೋವನ್ನೂ ಹಂಚಿಕೊಳ್ಳಲಾಗಿದೆ. ಆ ವಿಡಿಯೋದಲ್ಲಿ ಸೋರಾ ವಾಟರ್‌ಮಾರ್ಕ್ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆಜ್​ ತಕ್​ ಮಾಧ್ಯಮ ವರದಿ ಮಾಡಿದೆ.

ವಿಡಿಯೋ 2

ಈ ವಿಡಿಯೋದ ಒಂದು ಫ್ರೇಮ್​ ಅನ್ನು ರಿವರ್ಸ್​ ಇಮೇಜ್​ ಸರ್ಚ್​ ಇಂಜಿನ್​ನಲ್ಲಿ ಹುಡುಕಿದಾಗ, ಕೆಲವರು ಇದನ್ನು ನೈಜೀರಿಯಾಗೆ ಸಂಬಂಧಿಸಿದ ವಿಡಿಯೋ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವುದು ಕಂಡುಬಂದಿದೆ. ಹೆಚ್ಚಿನ ಸಂಶೋಧನೆಯ ನಂತರ, ಅಕ್ಟೋಬರ್ 13 ರಂದು ನೈಜೀರಿಯಾದ ಸಾಮಾಜಿಕ ಜಾಲತಾಣ ಪ್ರಭಾವಿಯೊಬ್ಬರು ಈ ವಿಡಿಯೋದ ದೀರ್ಘ ಆವೃತ್ತಿಯನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಇದು ನೈಜೀರಿಯಾದಿಂದ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ನೈಜೀರಿಯಾದ ಸುದ್ದಿ ಸಂಸ್ಥೆ ಎಡೋ ಆನ್‌ಲೈನ್ ಟೆಲಿವಿಷನ್ ಕೂಡ ಅಕ್ಟೋಬರ್ 13 ರಂದು “#Nigeria” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದೆ.

ಅಂದಹಾಗೆ, ದೆಹಲಿಯಲ್ಲಿ ಹುಡುಗಿಯರ ಹಾಸ್ಟೆಲ್‌ನ ಚರಂಡಿಯನ್ನು ಸ್ವಚ್ಛಗೊಳಿಸುವಾಗ ನೂರಾರು ಕಾಂಡೋಮ್‌ಗಳು ಕಂಡುಬಂದಿವೆ ಎಂಬುದು ಶುದ್ಧ ಸುಳ್ಳು. ಇದು ಎಐ ರಚಿತ ವಿಡಿಯೋವಾಗಿದ್ದು, ಅಪಪ್ರಚಾರದ ದುರುದ್ಧೇಶವನ್ನು ಈ ವೈರಲ್​ ವಿಡಿಯೋ ಹೊಂದಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಕಾನೂನು ಭಯಕ್ಕೆ ಹೆದರಿ ತಮ್ಮ ಫೇಸ್​ಬುಕ್​ ಪುಟಗಳಿಂದ ವಿಡಿಯೋವನ್ನು ಡಿಲೀಟ್​ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net