ಭಾರತದಲ್ಲಿ ಪ್ರಾಚೀನ ಕಾಲದ ನೌಕೆಗಳು ಪತ್ತೆ! ಗೊಂದಲಗಳ ಬೆನ್ನಲ್ಲೇ ಹೊರಬಿತ್ತು ಸತ್ಯಾಂಶ | Fact Check

ವಿಜಯವಾಣಿ - 2025-02-04T154008.424
Published on

Fact Check: ಇತ್ತೀಚೆಗಷ್ಟೇ ಭಾರತೀಯ ಪುರಾತತ್ತ್ವಜ್ಞರು ಪ್ರಾಚೀನ ಕಾಲದ ನೌಕೆಗಳು ಭಾರತದಲ್ಲಿ ಪತ್ತೆಹಚ್ಚಿದ್ದಾರೆ ಎಂದು ಹೇಳಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೋಡುಗರಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ. ಪುರಾತತ್ತ್ವಜ್ಞರು ಪತ್ತೆಹಚ್ಚಿರುವ ಮೂರು ನೌಕೆಗಳ ಫೋಟೋ ಮೊದಲಿಗೆ ಅಂಟಾರ್ಕ್ಟಿಕಾದಲ್ಲಿ ತೆಗೆದಿರುವುದು ಎಂದು ಹೇಳಿದ್ದೇ ಆದರೂ ನಂತರ ಭಾರತದ ಒಂದು ಹಳ್ಳಿಯಲ್ಲಿ ಸಿಕ್ಕಿರುವುದು ಎಂದು ತಿಳಿಸಲಾಗಿದೆ.

ಅನುಮಾನವೇನು?

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋಗಳು ಸೋಷಿಯಲ್ ಮೀಡಿಯಾಗೆ ಮಾತ್ರ ಸೀಮತವಾಗಿದೆ ಎಂದು ಕೆಲವರು ಹೇಳಿದರೆ, ಬಹುತೇಕರು ಇಲ್ಲ ಇದು ನಿಜವೇ ಅನಿಸುತ್ತದೆ ಎಂದು ಮನಸ್ಸಿಗೆ ತೋಚಿದ್ದನ್ನು ಹೇಳಿದ್ದಾರೆ. ಆದ್ರೆ, ಈ ಫೋಟೋಗಳನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಿ, ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಹೇಳಲಾಗಿದೆ.

ಅಸಲಿಯತ್ತೇನು?

ಎಐ ಅಲ್ಲ ಅನೋದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ, ವೈರಲ್ ಫೋಟೋಗಳ ಮೇಲೆ ರಿವರ್ಸ್ ಇಮೇಜ್ ಪರಿಶೀಲನೆ ಮಾಡಿ ನೋಡಿದಾಗ ಇದೊಂದು ನಕಲಿ ಫೋಟೋ ಆಗಿದೆ ಎಂಬುದು ದೃಢವಾಗಿದೆ. ಫೋಟೋ ಮೇಲೆ ಹಕ್ಕು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಇರದೆ ಇರುವುದು ಮತ್ತು ಭಾರತೀಯ ಪುರಾತತ್ತ್ವ ಶಾಸ್ತ್ರದ ಅಧಿಕೃತ ವೆಬ್‌ಸೈಟ್​ನಲ್ಲಿಯೂ ಯಾವ ಮಾಹಿತಿಯೂ ಲಭ್ಯವಾಗದೆ ಇರುವುದೇ ಇದಕ್ಕೆ ಸಾಕ್ಷಿ. ಹೀಗಾಗಿ ಇದೊಂದು ನಕಲಿ ಫೋಟೋ ಹಾಗೂ ಎಐ ಟೆಕ್ನಾಲಜಿ ಬಳಸಿಕೊಂಡು ಮಾಡಲಾಗಿದೆ ಎಂದೇ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net