ಹಿಂದೂತ್ವ ಎಂದಿಗೂ.....ಮತ್ತೆ ಟ್ವೀಟ್​ ಮಾಡಿ ಕೆಣಕಿದ ಲೀನಾ ಮಣಿಮೇಕಲೈ!

LeelA
Published on

ಬೆಂಗಳೂರು: ಮತ್ತೆ ವಿವಾದದ ಕಿಡಿ ಹೊತ್ತಿಸಿದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಟ್ವೀಟ್​ ಮಾಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಹಿಂದುತ್ವದ ಬಗ್ಗೆಯೇ ಗುರಿಯಾಗಿರಿಸಿ ಪದೇ ಪದೇ ಟ್ವೀಟ್​ ಮಾಡುತ್ತಿರುವ ಮಣಿಮೇಕಲೈ ಈ ಬಾರಿ ಮತ್ತೊಂದು ಕಿಡಿ ಹೊತ್ತಿಸಿದ್ದಾರೆ.

ಗುರುವಾರ ಹೊಸದಾಗಿ ಟ್ವೀಟ್​ ಮಾಡಿರುವ ಈಕೆ, ಇದು ನನ್ನ ಚಲನಚಿತ್ರವಲ್ಲ, ಹಿಂದುತ್ವ ಎಂದಿಗೂ ಭಾರತವಾಗಲಾರದು ಎಂದು ಟ್ವೀಟ್​ ಮಾಡಿದ್ದಾರೆ.ಸಾಕ್ಷ್ಯಚಿತ್ರವೊಂದರಲ್ಲಿ ಹಿಂದುಗಳು ಆರಾಧಿಸುವ ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್​ ಇಟ್ಟು ಅವಮಾನಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ಪದೇ ಪದೇ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಈಕೆಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.

ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಲೀನಾ ಮೈಣಿಮೇಕಲೈ, ಹಿಂದು ದೇವರ ಬಗ್ಗೆ ಅಪಮಾನಕಾರಿಯಾಗಿ ಫೋಟೋಗಳನ್ನು ಹಾಕಿ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಬೇಕಂತಂಲೇ ದುರುದ್ದೇಶದಿಂದ ಮಾಡುತ್ತಿದ್ದಾಳೆ.ಮೊದಲು ಮನೋವೈದ್ಯರ ಬಳಿ ಚಿಕಿತ್ಸೆಗೆ ವ್ಯವಸ್ಥೆ ಆಗಬೇಕು. ಬಿಟ್ಟಿ ಪ್ರಚಾರಕ್ಕಾಗಿ ಹಿಂದು ದೇವರ ಬಗ್ಗೆ ಲೀನಾ ಅವಹೇಳನಕಾರಿ ಪೋಸ್ಟ್​ ಮಾಡುತ್ತಿದ್ದಾಳೆ. ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net