

ನವದೆಹಲಿ: ಗೂಗಲ್, ಮೆಟಾ, ಎಕ್ಸ್ ನಂತಹ ಸಂಸ್ಥೆಗಳಿಗೆ ಶೀಘ್ರದಲ್ಲೇ ಭಾರತ ಭಾರಿ ಶಾಕ್ ನೀಡಲಿದೆ. ಶೇ.೧೮ ಇಂಟಿಗ್ರೇಟೆಡ್ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್(ಐಜಿಎಸ್ಟಿ) ವಿಧಿಸುವ ಸಾಧ್ಯತೆಯಿದೆ.
ಕೇಂದ್ರದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಅಂಡ್ ಕಸ್ಟಮ್ಸ್ ವಿಭಾಗವು ಐಜಿಎಸ್ಯಿಂದ ಗೂಗಲ್, ಮೆಟಾ, ಎಕ್ಸ್ ನಂತಹ
ಒಐಡಿಎಆರ್ ಸಂಸ್ಥೆಗಳಿಗೆ ನೀಡಿರುವ ವಿನಾಯಿತಿ ರದ್ದಾಗಲಿದೆ. ಇದೇ ಅಕ್ಟೋಬರ್ ನಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಜಾಹೀರಾತು, ಕ್ಲೌಡ್ ಸರ್ವೀಸ್, ಮ್ಯಾಜಿಕ್, ಸಬ್ಸ್ಕ್ರಿಪ್ಷನ್ ಸರ್ವೀಸ್, ಆನ್ಲೈನ್ ಶಿಕ್ಷಣ ನೀಡುತ್ತಿರುವ ಆಯಾ ಕಂಪೆನಿಗಳಿಂದ ಐಜಿಎಸ್ಟಿಯನ್ನು ವಸೂಲಿ ಮಾಡಲು ಕೇಂದ್ರ ಸಿದ್ಧತೆ ನಡೆಸಿದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದಾರೆ.
ಪ್ರಸ್ತುತ ಓಐಡಿಎಆರ್ ಸಂಸ್ಥೆಗಳು ಯಾವುದೇ ರೀತಿಯ ಟ್ಯಾಕ್ಸ್ ಸಲ್ಲಿಸುತ್ತಿಲ್ಲ. ಕೇಂದ್ರ, ಆಯಾ ರಾಜ್ಯ ಸರ್ಕಾರಗಳು ತೆರಿಗೆ ವ್ಯಾಪ್ತಿಯಿಂದ ವಿನಾಯಿತಿ ನೀಡಿವೆ. ಕೇವಲ ಮಾರಾಟ ಸಂಸ್ಥೆಗಳು ಮಾತ್ರ ತೆರಿಗೆ ಸಲ್ಲಿಸುತ್ತಿವೆ. ಕೇಂದ್ರ ವಾಣಿಜ್ಯ ಇಲಾಖೆ ತೆಗೆದುಕೊಳ್ಳಲಿರುವ ಈ ನಿರ್ಧಾರವು ಗೂಗಲ್, ಮೆಟಾ, ಎಕ್ಸ್ ನಂತಹ ಕಂಪೆನಿಗಳು ಸಮಗ್ರ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.
ಓಡಿಐಆರ್ ಎಂದರೇನು?: ಓಡಿಐಆರ್ ಅನ್ನು ಆನ್ಲೈನ್ ಇನ್ಫರ್ ಮೇಷನ್ ಡೇಟಾಬೇಸ್ ಯಾಕ್ಸಿಸ್ ಅಂಡ್ ರಿಟ್ರೀವಲ್ ಸರ್ವೀಸಸ್ ಎನ್ನುತ್ತಾರೆ. ಈ ವಿಭಾಗದಲ್ಲಿ ಸೇವೆ ಒದಗಿಸುವ ಸಂಸ್ಥೆಗಳಿಗೆ ಗ್ರಾಹಕರ ಜತೆ ಯಾವುದೇ ರೀತಿಯ ಭೌತಿಕ ಸಂಬಂಧವಿರುವುದಿಲ್ಲ. ಆನ್ಲೈನ್ ಮೂಲಕ ಗ್ರಾಹಕರ ಅಗತ್ಯತೆಗಳನ್ನು ತೀರಿಸುತ್ತವೆ. ಗೂಗಲ್, ಮೆಟಾ, ಎಕ್ಸ್ ನಂತಹ ಕಂಪೆನಿಗಳು ಇದೇ ಓಡಿಐಆರ್ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ