ವರ್ಕ್​ ಆಗದ ವಾಟ್ಸ್​ಪ್, ಫೇಸ್​ಬುಕ್, ಇನ್ಸ್ಟಾಗ್ರಾಮ್: ಬಳಕೆದಾರರು ಕಂಗಾಲು!

w
Published on

ಬೆಂಗಳೂರು: ಜನಪ್ರಿಯ ಮೆಸೆಂಜರ್ ವಾಟ್ಸ್​ಪ್, ಹಾಗೂ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್​ ತಾಣಗಳು ಕೆಲಕಾಲ ಸ್ಥಗೀತಗೊಂಡಿವೆ. ಭಾರತವೂ ಸೇರಿದಂತೆ ಪ್ರಪಂಚದ ನಾನಾ ಕಡೆ ಈ ಸಮಸ್ಯೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಸಮಸ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದರಿಂದ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ಕಳಿಸಿದ ಸಂದೇಶಗಳು ಹೋಗದೇ ಇದ್ದಿದ್ದರಿಂದ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಸುಮಾರು 11 ಗಂಟೆಗೆ ಈ ಸಮಸ್ಯೆ ಕಾಣಿಸಿಕೊಂಡು, 11:35 ಗಂಟೆಯವರಿಗೂ ಹಾಗೇ ಇತ್ತು. ಇದಕ್ಕಾಗಿ ಫೇಸ್​ಬುಕ್​ ಸಂಸ್ಥೆ ಬಳಕೆದಾರರಲ್ಲಿ ಇದುವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೆಬ್ರವರಿಯಲ್ಲಿ ಇದೇ ರೀತಿ ಸಮಸ್ಯೆ ಕಾಣಿಸಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net