ಡ್ರಾಪ್ ನೆಪದಲ್ಲಿ ಸುಲಿಗೆ

smg crime 3
ಬಂಧಿತ ಆರೋಪಿಗಳು, ವಶಕ್ಕೆ ಪಡೆದ ಹಣ ಹಾಗೂ ಮೊಬೈಲ್‌ನೊಂದಿಗೆ ಪೊಲೀಸ್ ಸಿಬ್ಬಂದಿ ಚಿತ್ರದಲ್ಲಿದ್ದಾರೆ.
Published on

ಶಿವಮೊಗ್ಗ: ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಸುಲ್ತಾನ್‌ಮಟ್ಟಿಯ ಎಸ್.ಚೇತನ್ (21) ಮತ್ತು ಕೆ.ಕೀರ್ತನ್ (21) ಬಂಧಿತರು. ಆರೋಪಿಗಳಿಂದ 11,300 ರೂ. ನಗದು, 50 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಮತ್ತು ಒಂದು ಬೈಕ್ ಜಪ್ತಿ ಮಾಡಲಾಗಿದೆ.
ಸೆ.1ರಂದು ಸಂಜೆ ಮಾಚೇನಹಳ್ಳಿಗೆ ತೆರಳಲು ಭದ್ರಾವತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಉತ್ತರಪ್ರದೇಶದ ಕೆಡ್ಲಿಪುರ್ ಗ್ರಾಮದ ರವೀಂದ್ರ ಯಾದವ್(39) ಎಂಬುವರನ್ನು ಇವರಿಬ್ಬರು ಜೇಡಿಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದರು.
ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭದ್ರಾವತಿ ಡಿವೈಎಸ್ಪಿ ಕೆ.ಆರ್.ನಾಗರಾಜ್, ಸಿಪಿಐ ಜೆ.ಶ್ರೀಶೈಲಕುಮಾರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಠಾಣೆಯ ಪಿಎಸ್‌ಐಗಳಾದ ಟಿ.ರಮೇಶ್ ಮತ್ತು ಭಾರತಿ, ಸಿಬ್ಬಂದಿ ಟಿ.ನವೀನ್ ಹಾಗೂ ಪ್ರವೀಣಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net