

ಬೆಂಗಳೂರು: ಲಾಕ್ಡೌನ್ ನಡುವೆಯೂ ಕಳೆದ ಎರಡು ದಿನಗಳಲ್ಲಿ ಕೊಡಿಗೆಹಳ್ಳಿ ಮತ್ತು ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ 2 ಸುಲಿಗೆ ಪ್ರಕರಣಗಳು ನಡೆದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದ ನವೀನ್ ಎಂಬಾತನನ್ನು ಓಕಳಿಪುರ ಅಂಡರ್ಪಾಸ್ನಲ್ಲಿ 8-10 ಮಂದಿಯಿದ್ದ ದುಷ್ಕರ್ವಿುಗಳ ಗ್ಯಾಂಗ್ ಅಡ್ಡಗಟ್ಟಿ ಚಾಕು ತೋರಿಸಿ ಹಣ, ಮೊಬೈಲ್ ಕೊಡುವಂತೆ ಬೆದರಿಸಿದೆ.
ಭಯಗೊಂಡ ಬಿದ್ದ ಯುವಕ ರಕ್ಷಣೆಗಾಗಿ ಕೂಗಿಕೊಂಡಿದಾನೆ. ಅದೇ ವೇಳೆ ಬೈಕ್ ಸವಾರ ಹತ್ತಿರ ಬರುವುದನ್ನು ಗಮನಿಸಿ ದುಷ್ಕರ್ವಿುಗಳು ಪರಾರಿಯಾಗಿದ್ದಾರೆ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ.
ರಾಜೀವ್ಗಾಂಧಿನಗರದಲ್ಲಿ ಮಂಗಳವಾರ (ಏ.7) ಬಡವರಿಗೆ ದಿನಸಿ ಸಾಮಗ್ರಿ ಹಂಚುತ್ತಿದ್ದಾಗ ಭಾರತಿ (55) ಎಂಬುವರು ಮನೆ ಮುಂದೆ ನಿಂತು ವೀಕ್ಷಿಸುತ್ತಿದ್ದರು. ಆಗ ಬೈಕ್ನಲ್ಲಿ ಬಂದ ಯುವಕನೊಬ್ಬ ಮಹಿಳೆಯ ಕುತ್ತಿಗೆಯಿಂದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಸ್ಥಳೀಯ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೊಡಿಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.