More

    ಗೋವಾದಲ್ಲಿ ಕರೊನಾಕ್ಕೆ ಆಯುರ್ವೇದದ ಚಿಕಿತ್ಸೆ- ಆಧಾರ ಏನಿದೆ ಎಂದು ಪ್ರಶ್ನಿಸಿದ ಗೋವಾ ಫಾರ್ವಡ್​ ಪಾರ್ಟಿ

    ಪಣಜಿ: ಕರೊನಾ COVID19 ವೈರಸ್​ನಿಂದ ಹರಡುವ ಸೋಂಕು ತಡೆಯುವುದಕ್ಕೆ ಆಯುರ್ವೇದದಲ್ಲಿ ಔಷಧವಿದೆ ಎಂಬ ಸುದ್ದಿ ಕರ್ನಾಟಕದಲ್ಲಿ ಪ್ರತಿಧ್ವನಿಸಿದೆ. ಡಾ.ಗಿರಿಧರ ಕಜೆಯವರು ಈ ವಿಚಾರವಾಗಿ ಗುರುವಾರವಷ್ಟೇ ಟ್ವೀಟ್ ಮಾಡಿ ದೇಶದ ಗಮನಸೆಳೆದಿದ್ದಾರೆ. ಈ ನಡುವೆ, ಕರೊನಾಕ್ಕೆ ಆಯುರ್ವೇದ ಚಿಕಿತ್ಸೆಯ ವಿಚಾರ ಪಕ್ಕದ ಗೋವಾ ರಾಜ್ಯದಲ್ಲೂ ಚರ್ಚೆಯ ಕೇಂದ್ರ ಬಿಂದುವಾಗಿದೆ.

    ಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ: ವಿಜಯವಾಣಿ ಅಂಕಣಕಾರ ಡಾ.ಗಿರಿಧರ ಕಜೆ ಪ್ರತಿಪಾದನೆ

    ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್​ ಅವರು ರಾಜ್ಯದಲ್ಲಿರುವ COVID19 ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ಕೊಡಿಸುತ್ತಿರುವ ವಿಚಾರ ಘೋಷಿಸಿದ್ದರು. ಈ ವಿಷಯ ಬಹಿರಂಗವಾಗುತ್ತಿರುವಂತೆಯೇ ಗೋವಾ ಫಾರ್ವರ್ಡ್​ ಪಾರ್ಟಿ ಅಧ್ಯಕ್ಷ ವಿಜಯ್​ ಸರದೇಸಾಯಿ ಅವರು ಪ್ರತಿಕ್ರಿಯಿಸಿದ್ದು, ರೋಗಿಗಳ ಮೇಲೇನಾದರೂ ಪ್ರಯೋಗ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಆಯುರ್ವೇದದ ಪ್ರಯೋಜನಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದಾಗ್ಯೂ, ಕರೊನಾ ರೋಗಿಗಳಿಗೆ ಯಾವ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿ. ಇದಕ್ಕೆ ಏನಾದರೂ ಸೈಂಟಿಫಿಕ್ ಆಧಾರಗಳಿವೆಯೇ? ಇದಕ್ಕೆ ಸಂಬಂಧಿಸಿ ಯಾವುದಾದರೂ ವೈದ್ಯಕೀಯ ಅಧ್ಯಯನ ಏನಾದರೂ ನಡೆದಿದೆಯೇ? ಅದರ ವರದಿಗಳು ಏನಾದರೂ ಇದನ್ನು ಬೆಂಬಲಿಸುವಂತೆ ಇದೆಯೇ? ಗೋವನ್ನರ ಮೇಲೆ ಪ್ರಯೋಗ ನಡೆಯುತ್ತಿದೆಯೋ ಏನೋ ಎಂಬ ಅನುಮಾನ ನನ್ನದು ಎಂದು ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕರೊನಾಕ್ಕೆ ಆಯುರ್ವೇದ ಚಿಕಿತ್ಸೆಯ ವಿಚಾರವನ್ನು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅನುಮೋದಿಸುತ್ತಾರೆಯೇ ಮತ್ತು ಅದನ್ನು ಒಪ್ಪಿಕೊಳ್ಳುತ್ತಾರೆಯೇ ಎಂದೂ ಸರದೇಸಾಯಿ ಪ್ರಶ್ನಿಸಿದ್ದಾರೆ.

    ಸರದೇಸಾಯಿ ಅವರ ಸರಣಿ ಪ್ರಶ್ನೆಗಳಿಗೆ ಕಾರಣವಾದುದು ಮುಖ್ಯಮಂತ್ರಿ ಸಾವಂತ್ ಅವರ ಹೇಳಿಕೆ – ಕರೊನಾ ರೋಗಿಗಳು ಮತ್ತು ಶಂಕಿತರಿಗೆ ಆಯುರ್ವೇದ ಮತ್ತು ಅಲೋಪಥಿ ಔಷಧಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ರೀತಿ ಚಿಕಿತ್ಸೆ ಒದಗಿಸುತ್ತಿರುವ ಏಕೈಕ ರಾಜ್ಯ ಗೋವಾ ಎಂದು ಅವರು ಹೇಳಿಕೊಂಡಿದ್ದರು. ಸದ್ಯ ಗೋವಾದಲ್ಲಿ ಆರು ಸಕ್ರಿಯ ಕರೊನಾ ಶಂಕಿತ ರೋಗಿಗಳಿದ್ದಾರೆ. ವಿಶೇಷ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆಯೂ ಮುಂದುವರಿದಿದೆ. (ಏಜೆನ್ಸೀಸ್)

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts