ಎಲಿವೇಟ್-2024ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Startup
Published on

ಬೆಂಗಳೂರು: ಎಲೆಕ್ಟ್ರಾನಿಕ್ಸೃ್, ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯು ಸ್ಟಾರ್ಟ್ ಅಪ್‌ಗಳಿಗೆ ಆರ್ಥಿಕ ಮತ್ತು ಕಾರ್ಯತಂತ್ರದ ಬೆಂಬಲ ನೀಡುವ ಎಲಿವೇಟ್ 2024 ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಗಡುವನ್ನು ಡಿಸೆಂಬರ್ 5, 2024ಕ್ಕೆ ವಿಸ್ತರಿಸಲಾಗಿದೆ.

ಎಲಿವೇಟ್ 2024 ಕರ್ನಾಟಕದಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರತಿ ಸ್ಟಾರ್ಟ್‌ಅಪ್‌ಗೆ 50 ಲಕ್ಷ ರೂ.ವರೆಗೆ ಅನುದಾನವನ್ನು ಒದಗಿಸುತ್ತದೆ, ಜತೆಗೆ ತಜ್ಞರ ಮಾರ್ಗದರ್ಶನ ಮತ್ತು ಬಂಡವಾಳ ನೆಟ್‌ವರ್ಕ್‌ಗಳಿಗೆ ಅವಕಾಶ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಈ ವಿಸ್ತರಣೆಯು ಹೆಚ್ಚಿನ ಸ್ಟಾರ್ಟ್‌ಅಪ್‌ಗಳಿಗೆ, ವಿಶೇಷವಾಗಿ ಎಐ, ಎಂಎಲ್, ಡೀಪ್ ಟೆಕ್, ರೊಬಾಟಿಕ್ಸೃ್, ಬ್ಲಾಕ್‌ಚೈನ್, 5ಎ, ಸ್ಪೇಸ್ ಟೆಕ್ ಮತ್ತು ಸೈಬರ್ ಭದ್ರತೆ ಯಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ.

ಆರ್ಥಿಕ ಬೆಂಬಲದ ಜತೆಗೆ, ಎಲಿವೇಟ್ 2024 ರ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳು ಕರ್ನಾಟಕದ ಉತ್ಕೃಷ್ಟತೆಯ ಕೇಂದ್ರಗಳು ಮತ್ತು ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್‌ಗಳು ಸೇರಿದಂತೆ ವಿವಿಧ ಪ್ರೋತ್ಸಾಹ ಯೋಜನೆಗಳಡಿ ಪೇಟೆಂಟ್ ವೆಚ್ಚಗಳು, ಮಾರ್ಕೆಟಿಂಗ್ ವೆಚ್ಚಗಳು, ಜಿಎಸ್‌ಟಿ ಮತ್ತು ಗುಣಮಟ್ಟದ ಪ್ರಮಾಣೀಕರಣಕ್ಕಾಗಿ ಮರುಪಾವತಿಗಳು, ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಮಾರುಕಟ್ಟೆ ಪ್ರವೇಶ ಕಾರ್ಯಕ್ರಮ ಮತ್ತು ಆದ್ಯತೆಯ ಮಾರುಕಟ್ಟೆ ಪ್ರವೇಶದಂತಹ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಕಲ್ಪಿಸುತ್ತದೆ.

ಕರ್ನಾಟಕ ಆರಂಭಿಕ ನೀತಿ 2022-2027 ರಾಜ್ಯವನ್ನು ಪ್ರಮುಖ ನಾವೀನ್ಯತೆ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಮತ್ತು ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಆರ್ಥಿಕ ಮತ್ತು ಕಾರ್ಯತಂತ್ರದ ಬೆಂಬಲವನ್ನು ನೀಡುವುದು ಉಔಉ್ಖಅಉ 2024 ರ ಪ್ರಮುಖ ಅಂಶವಾಗಿದೆ.

ಆಸಕ್ತರು ತಮ್ಮ ಅರ್ಜಿಗಳನ್ನು ಅಧಿಕೃತ ಪೋರ್ಟಲ್ ಮೂಲಕ ಸಲ್ಲಿಸಬಹುದು: www.missionstartupkarnataka.org

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net