ವಾಹನಗಳ ದಾಖಲೆ ಸಿಂಧುತ್ವ ವಿಸ್ತರಣೆ

traffic mng
Published on

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳ ಸಿಂಧುತ್ವವನ್ನು 2021 ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಿದೆ. ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಫಿಟ್​ನೆಸ್​, ಪರ್ಮಿಟ್​, ಚಾಲನಾ ಪರವಾನಗಿ ಮತ್ತು ರಿಜಿಸ್ಟ್ರೆಷನ್​ ಸರ್ಟಿಫಿಕೆಟ್​ ಮುಂತಾದವುಗಳ ಸಿಂಧುತ್ವ ದಿನಾಂಕ ವಿಸ್ತರಣೆಗೊಂಡಿದೆ.

2020 ೆಬ್ರವರಿ 1ರಿಂದ ಅವಧಿ ಮುಗಿದ ಅಥವಾ 2021 ಸೆಪ್ಟೆಂಬರ್​ 30ರೊಳಗೆ ವಾಯಿದೆ ಅಂತ್ಯಗೊಳ್ಳುವ ಈ ಎಲ್ಲ ದಾಖಲೆಗಳಿಗೆ ಇದು ಅನ್ವಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯಕವಾಗುತ್ತದೆ. ಈ ಎಲ್ಲ ದಾಖಲೆಗಳನ್ನು 2021 ಸೆಪ್ಟೆಂಬರ್​ 30ರವರೆಗೆ ಸಿಂಧುವಾಗಿ ಪರಿಗಣಿಸುವಂತೆ ಸಂಬಂಧಪಟ್ಟ ಎಲ್ಲ ಪ್ರಾಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net