ಖಾಸಗಿ ಬಸ್‌ಗೂ ಶಕ್ತಿ ಯೋಜನೆ ವಿಸ್ತರಿಸಿ

22kls3
ಖಾಸಗಿ ಬಸ್ ಮಾಲೀಕರು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
Published on

ಕಳಸ: ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಖಾಸಗಿ ಬಸ್ ಮಾಲೀಕರು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಶಕ್ತಿ ಯೋಜನೆ ಜಾರಿಯಾದ ನಂತರ ಖಾಸಗಿ ಬಸ್ ಉದ್ಯಮ ನೆಲಕಚ್ಚಿದೆ. ಅನೇಕ ಬಸ್‌ಗಳು ಸಂಚಾರ ನಿಲ್ಲಿಸಿವೆ. ರಾಜ್ಯದ 9 ಸಾವಿರ ಖಾಸಗಿ ಬಸ್‌ಗಳು ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿ ಮಾಡುತ್ತಿವೆ. ಇದೀಗ ಉದ್ಯಮ ಸ್ಥಗಿತಗೊಂಡರೆ ಸಾವಿರಾರು ಜನರು ಬೀದಿಗೆ ಬರುತ್ತಾರೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಕೆ.ಕೆ.ಬಾಲಕೃಷ್ಣ ಭಟ್ ಹಾಗೂ ಉಪಾಧ್ಯಕ್ಷ ಸದಾನಂದ ಛಾತ್ರ ಮುಖ್ಯಮಂತ್ರಿ ಗಮನ ಸೆಳೆದರು. ಖಾಸಗಿ ಬಸ್‌ಗಳ ಮುಂದೆ ರಾಜ್ಯ ಸಾರಿಗೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬಾರದು. ತಮಿಳುನಾಡು ಮಾದರಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರಕ್ಕೆ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು. ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿದ್ಧರಾಮಯ್ಯ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net