ಜಿಹಾದಿಗಳ ದಾಳಿಯ ನಡುವೆ ಮಾಲಿಯ ಮೂರು ನಗರಗಳಲ್ಲಿ ಭೀಕರ ಸರಣಿ ಸ್ಪೋಟ

France Watching Police
FILE - In this Nov.21, 2020 file photo a demonstrator takes a picture of policemen during a protest against bill on police images, in Paris. As videos helped reveal many cases of police brutality, French civil rights activists voiced fears that a new security law would threaten efforts by people from minorities and poor neighborhoods to document incidents involving law enforcement officers. French President Emmanuel Macron's government is pushing a new security bill that would notably make it illegal to publish images of officers with intent to cause them harm. (AP Photo/Christophe Ena, File)
Published on

ಬಮಾಕೊ (ಮಾಲಿ) : ಮಾಲಿಯಲ್ಲಿ ಜಿಹಾದಿಗಳ ದಾಳಿ ಮುಂದುವರಿದಿದೆ. ಈ ನಡುವೆ, ಉತ್ತರ ಮಾಲಿಯ ಕಿದಲ್​, ಗಾಂವ್​, ಮೇನಕಾ ನಗರಗಳಲ್ಲಿ ಸೋಮವಾರ ಭೀಕರ ಸರಣಿ ಸ್ಪೋಟ ಸಂಭವಿಸಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನರ ಮಾಹಿತಿ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ.

ಸೇನಾ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಿರುವ ಉಗ್ರರು, ಯೋಧರ ಮತ್ತು ನಾಗರಿಕ ಹತ್ಯೆಯನ್ನು ಮುಂದುವರಿಸಿದ್ದಾರೆ. ಕಿದಲ್ ನಿವಾಸಿ ಸುಲೈಮಾನ್​ ಅಗ್​ ಮೊಹಮ್ಮದ್ ಅಲಿ ಪ್ರಕಾರ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಮತ್ತು ಫ್ರೆಂಚ್ ಆಪರೇಶನ್​ ಬರ್ಖಾನೆ ಯೋಧರ ಕ್ಯಾಂಪ್​ಗಳಿರುವಲ್ಲಿಂದ 10 ಸ್ಫೋಟಗಳು ಕೇಳಿಸಿವೆ.

ಈ ನಡುವೆ, ಕಿದಲ್​, ಗಾಂವ್ ಮತ್ತು ಮೇನಕಾ ಎಂಬಲ್ಲಿ ಸೇನಾ ಶಿಬಿರಗಳ ಮೇಲೆ ಉಗ್ರರು ಸೋಮವಾರ ಬೆಳಗ್ಗೆ ರಾಕೆಟ್ ದಾಳಿ ನಡೆಸಿರುವುದನ್ನು ವಿಶ್ವಸಂಸ್ಥೆ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡುವುದಕ್ಕೆ ಅರ್ಹರಲ್ಲದ ಕಾರಣ ಹೆಸರು ಬಹಿರಂಗಪಡಿಸದೇ ದೃಢೀಕರಿಸಿದ್ದಾರೆ. ಈ ದಾಳಿಗೆ ಸಂಬಂಧಿಸಿ ಯಾವುದೇ ಉಗ್ರ ಸಂಘಟನೆಗಳು ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಸಾವು-ನೋವು, ನಾಶ ನಷ್ಟದ ವಿಚಾರಗಳಿನ್ನೂ ಬಹಿರಂಗವಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net