ಹೈದರಾಬಾದ್​ಗೆ ಕರ್ನಾಟಕದ 'ಕ್ಷೀರಭಾಗ್ಯ'..5ಸಾವಿರ ಕೆಜಿ ಹಾಲಿನ ಪುಡಿ ಪತ್ತೆ - ಅವಧಿ ಮೀರಿದ್ದರೂ ಬೇಕರಿಗಳಿಗೆ ಮಾರಾಟ!

milk powder
Published on

ಹೈದರಾಬಾದ್: ಕ್ಷೀರ ಭಾಗ್ಯ ಯೋಜನೆಯಡಿ ಕರ್ನಾಟಕದ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿ ನೆರೆಯ ತೆಲಂಗಾಣ ರಾಜಧಾನಿ ಹೈದರಾಬಾದ್​ನ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸಿಕಿಂದ್ರಾಬಾದ್​ನ ವ್ಯಾಪಾರಿಯೊಬ್ಬನಿಂದ 5 ಸಾವಿರ ಕೆಜಿ ಗೂ ಹೆಚ್ಚು ಅವಧಿ ಮೀರಿದ ಹಾಲಿನ ಪುಡಿ ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಕಾರ್ಯಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಿಕಂದರಾಬಾದ್‌ನ ಉದ್ಯಮಿ ದಾಮೋದರ್ ಎಂಬಾತನನ್ನು ಬಂಧಿಸಿ 5,280 ಕೆಜಿ ಅವಧಿ ಮೀರಿದ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಲಿನ ಪುಡಿಯನ್ನು ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯಡಿ ಈ ಹಾಲಿನ ಪುಡಿಯನ್ನು ಶಾಲೆಗಳಿಗೆ ಉಚಿತವಾಗಿ ವಿತರಿಸುತ್ತದೆ. ಆದರೆ ಕೆಲವರು ಹಣದಾಸೆಗೆ ಈ ಹಾಲಿನ ಪುಡಿಯನ್ನು ಅಡ್ಡದಾರಿ ಹಿಡಿದು

ಅಕ್ರಮವಾಗಿ ಕರ್ನಾಟಕದಿಂದ ಹೈದರಾಬಾದ್ ನಗರಕ್ಕೆ ತಂದು ಮಾರಾಟ ಮಾಡುತ್ತಾರೆ. ವಿಶೇಷವಾಗಿ ಸಿಕಂದರಾಬಾದ್ ಮತ್ತು ತಾರ್ನಾಕದ ವಿಜಯಪುರಿ ಕಾಲೋನಿಯಲ್ಲಿ ಅವಧಿ ಮೀರಿದ ಹಾಲಿನ ಪುಡಿ ಮಾರಾಟ ಮಾಡಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬೇಕರಿಗಳಲ್ಲಿ ಸಿಹಿ ತಿನಿಸುಗಳಿಗೆ ಬಳಕೆ:

ಕಳ್ಳಮಾರ್ಗದಲ್ಲಿ ಬಂದ ಹಾಲಿನ ಪುಡಿಯನ್ನು ಬೇಕರಿ ಮಾಲೀಕರು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಪನೀರ್ ಮತ್ತು ಸಿಹಿತಿಂಡಿಗಳನ್ನು ತಯಾರಿಸಲು ಬಳಸುತ್ತಿದ್ದಾರೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಅವಧಿ ಮುಗಿದ ಹಾಲಿನ ಪುಡಿಯನ್ನು ಜನರ ಆರೋಗ್ಯ ಲೆಕ್ಕಿಸದೆ ಬಳಸುತ್ತಿರುವುದು ಗಮನಾರ್ಹಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net