

ಶ್ರೀನಿವಾಸಪುರ: ಅವಧಿ ಮೀರಿದ ಔಷಧಗಳನ್ನು ಗ್ರಾಮದ ಹೊರವಲಯದಲ್ಲಿನ ಮೂರಾರ್ಜಿ ವಸತಿ ಶಾಲೆಯ ಕಾಂಪೌಂಡ್ ಪಕ್ಕದ ತಿಪ್ಪೆಗೆ ಬಿಸಾಡಲಾಗಿದೆ. ತಾಲೂಕಿನ ಗೌನಿಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಸ್ತಾನು ಮಾಡಿದ್ದ ಔಷಧಗಳನ್ನು ರೋಗಿಗಳಿಗೆ ವಿತರಿಸದೆ ಅವಧಿ ಮೀರಿದ ಬಳಿಕ ಮಂಗಳವಾರ ವೈದ್ಯಕಿಯ ಸಿಬ್ಬಂದಿ ವಾಹನದಲ್ಲಿ ತೆಗೆದುಕೊಂಡು ಹೋಗಿ ಬಿಸಾಡುತ್ತಿದ್ದರು. ಇದನ್ನು ಕಂಡ ಸ್ಥಳಿಯರು ಪ್ರಶ್ನಿಸಿದಾಗ ಸಿಬ್ಬಂದಿ ತಪ್ಪಿಸಿಕೊಂಡಿದ್ದಾರೆ. ಕ್ಯಾಲ್ಸಿಯಂ ಟ್ಯಾಬ್ಲೇಟ್ಸ್, ಬಿಪಿ, ಭೇದಿ ಮಾತ್ರೆ ಸೇರಿ ಇನ್ನಿತರ ಮಾತ್ರೆಗಳ ಹಾಗೂ ಚುಚ್ಚು ಮದ್ದುಗಳ ಕಂತೆಯ ಮೂಟೆಗಳನ್ನು ನೋಡಿದ ಸಾರ್ವಜನಿಕರು ಗಾಬರಿಯಾಗಿದ್ದಾರೆ.
ಆಸ್ಪತ್ರೆಯನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ಅಚಾತುರ್ಯವಾಗಿ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ಪುನ@ ತರಿಸಿ, ಬಯೋಮೆಡಿಕಲ್ಸ್ ಮೀರ ಏಜೆನ್ಸಿ ಅವರಿಗೆ ಕಳುಹಿಸಲಾಗಿದೆ. > ವೆಂಕಟೇಶ್ ವೈದ್ಯಾಧಿಕಾರಿ