

ಕೋಲಾರ/ಕದರೀಪುರ: ಕೋಲಾರ ತಾಲೂಕಿನ ಪಚ್ಚಾರ್ಲಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ಅವಧಿ ಮುಗಿದ ಪುಷ್ಟಿ ಆಹಾರ ಪ್ಯಾಕೇಟ್ಗಳನ್ನು ಸರಬರಾಜು ಮಾಡಿದ್ದು, ಗ್ರಾಮಸ್ಥರ ಸಮಯ ಪ್ರೆಯಿಂದ ಅವಧಿ ಮುಗಿರುವ ಆಹಾರವನ್ನು ಮಕ್ಕಳಿಗೆ ನೀಡದಂತೆ ತಡೆಯಲಾಗಿದೆ.
ಅಂಗನವಾಡಿ ಕೇಂದ್ರದಲ್ಲಿ 20 ಮಕ್ಕಳಿದ್ದು, ಈ ಆಹಾರವನ್ನು ಸೇವಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಮುಂದಾಗುವ ಅನಾಹುತ ತಪ್ಪಿಸಿದಂತಾಗಿದೆ. ಗ್ರಾಮದ ಯುವ ಮುಖಂಡ ಈರಪ್ಪ ಮಾತನಾಡಿ, ಗ್ರಾಮದಲ್ಲಿ ಎಲ್ಲ ಕೂಲಿ ಕೆಲಸಕ್ಕೆ ಹೋಗುವವರು. ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಡುತ್ತಾರೆ. ಮಕ್ಕಳಿಗೆ ನೀಡುವ ಆಹಾರದ ಪ್ಯಾಕೇಟ್ಗಳ ಮೇಲೆಯೇ ಅವಧಿ ಮೀರಿರುವುದು ಗೊತ್ತಿದ್ದರೂ ಸರಬರಾಜು ಮಾಡಲಾಗಿದೆ. ಅನಾಹುತ ಸಂಭವಿಸಿದರೆ ತಂದೆ-ತಾಯಿಗಳ ಪಾಡು ಏನಾಗುತ್ತಿತ್ತು?. ಸರ್ಕಾರ ಇಂತಹ ಟನೆಗಳಿಗೆ ಅವಕಾಶ ಕೊಡದೆ ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಕೋಟ್..
ಅವಧಿ ಮುಗಿದಿರುವ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಗಳಿಗೆ ನೀಡಲು ಸಾಧ್ಯವಿಲ್ಲ. ಅಂಗನವಾಡಿ ಸಿಬ್ಬಂದಿಯ ಲೋಪವೋ, ಇಲ್ಲವೇ ಸರಕು ಸರಬರಾಜುದಾರರ ಲೋಪವೋ ತನಿಖೆ ಮಾಡಿ ಈ ರೀತಿ ತಪ್ಪು ಮರುಕಳಿಸದಂತೆ ಕ್ರಮವಹಿಸಲಾಗುವುದು. -ವಿನೋದ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ