

ನವದೆಹಲಿ: ಕಾಂಗ್ರೆಸ್ನಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಿರೀಕ್ಷಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾಗ್ದಾಳಿ ನಡೆಸಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ (PM Narendra Modi), ರಾಷ್ಟ್ರಪತಿಗಳ ಭಾಷಣವು ಸ್ಪೂರ್ತಿದಾಯಕ, ಪರಿಣಾಮಕಾರಿ ಮತ್ತು ನಮ್ಮೆಲ್ಲರಿಗೂ ಮುಂದಿನ ದಾರಿಯನ್ನು ತೋರಿಸಿದೆ. ರಾಷ್ಟ್ರಪತಿಗಳ ಭಾಷಣದಲ್ಲಿ ಸಬ್ಕಾ ಸಾಥ್, ಸಬ್ಕಾ ವಿಕಾಸ್' ಬಗ್ಗೆ ಸಾಕಷ್ಟು ಹೇಳಲಾಗಿದೆ. ಇದರಲ್ಲಿ ಏನು ಸಮಸ್ಯೆ ಇದೆ ಎಂದು ಅವರು ಅರ್ಥಮಾಡಿಕೊಳ್ಳಲು ಕಾಂಗ್ರೆಸ್ನವರಿಂದ ಸಾಧ್ಯವಿಲ್ಲ.
ಕಾಂಗ್ರೆಸ್ನವರಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಿರೀಕ್ಷಿಸುವುದು ನಾವು ಮಾಡುವ ದೊಡ್ಡತಪ್ಪು. ಇದು ಅವರ ಆಲೋಚನೆಯನ್ನು ಮೀರಿದೆ ಮತ್ತು ಅವರ ಮಾರ್ಗಸೂಚಿಗೆ ಸರಿಹೊಂದುವುದಿಲ್ಲ. ಏಕೆಂದರೆ ಇಡೀ ಪಕ್ಷವು ಒಂದೇ ಕುಟುಂಬಕ್ಕೆ ಮೀಸಲಾಗಿದೆ. ಕಾಂಗ್ರೆಸ್ನವರು ಮೊದಲು ಪರಿವಾರ ಎಂದು ಹೇಳುತ್ತಾರೆ.
ಇಂದು ಸಮಾಜದಲ್ಲಿ ಜಾತಿ ವಿಚಾರವನ್ನು ಹರಡುವ ಪ್ರಯತ್ನಗಳು ನಡೆಯುತ್ತಿವೆ. ಒಬಿಸಿ ಸಂಸದರು ಸಂಸದರು ಒಬಿಸಿ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ರಾಜಕೀಯಕ್ಕೆ ಸರಿಹೊಂದದ ಕಾರಣ ಅವರ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಆದರೆ ನಾವು ಈ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿದ್ದೇವೆ. ದೇಶದ ಜನರು ನಮಗೆ ಮೂರನೇ ಬಾರಿಗೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾವು ಅವರಿಗೆ ಕೃತಜ್ಞನಾಗಿದ್ದೇನೆ. ದೇಶದ ಜನರು ನಮ್ಮ ಅಭಿವೃದ್ಧಿ ಮಾದರಿಯನ್ನು ಪರೀಕ್ಷಿಸಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ ಮತ್ತು ಬೆಂಬಲಿಸಿದ್ದಾರೆ.
ನಮ್ಮ ನೀತಿಗಳು, ನಮ್ಮ ಕಾರ್ಯಕ್ರಮಗಳು, ನಮ್ಮ ಮಾತು, ನಮ್ಮ ನಡವಳಿಕೆಯಲ್ಲಿ ಮಾನದಂಡವಾಗಿ ಪರಿಗಣಿಸುವ ಮೂಲಕ ನಾವು ನಿರಂತರವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಪ್ರಯತ್ನಿಸಿದ್ದೇವೆ. ಈ ಮಾತನ್ನು ನಾನು ಬಹಳ ಹೆಮ್ಮೆ ಮತ್ತು ತೃಪ್ತಿಯಿಂದ ಹೇಳುತ್ತೇನೆ ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.