ಅಂಗಸೌಷ್ಠವ ಕಾಪಾಡಿಕೊಳ್ಳಲು ಮಾತ್ರವಲ್ಲ, ತ್ವಚೆಯ ಹೊಳಪಿಗೂ ವ್ಯಾಯಾಮ-ಯೋಗ ಸಹಕಾರಿ

international day of yoga
Published on

ವ್ಯಾಯಾಮ ಅಂಗಸೌಷ್ಠವವನ್ನು ಕಾಪಾಡಿಕೊಳ್ಳುವ ಕ್ರಿಯೆ. ಆದರೆ ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯ ಮಾತ್ರವಲ್ಲದೆ, ತ್ವಚೆಯ ಆರೋಗ್ಯವೂ ಚೆನ್ನಾಗಿರುತ್ತದೆ. ಹೇಗೆ ಅಂತೀರಾ?, ಮುಂದೆ ಓದಿ…

ವ್ಯಾಯಾಮ ಮಾಡುವುದರಿಂದ ಶರೀರ ಹಗುರವಾಗುತ್ತದೆ. ಚರ್ಮದಲ್ಲಿ ಕಾಂತಿ ಮೂಡುತ್ತದೆ. ಚಟುವಟಿಕೆ ಹೆಚ್ಚಿ ಉತ್ಸಾಹ ಮೂಡುತ್ತದೆ. ಯೋಗವು ಮಹಿಳೆಗೆ ತನ್ನ ಸೌಂದರ್ಯ, ಹೆಣ್ತನ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಶಾರೀರಿಕ, ಮಾನಸಿಕ ಸ್ಥಿತಿಗಳನ್ನು ಕಾಪಾಡಲು ಯೋಗ ಮತ್ತು ಪ್ರಾಣಾಯಾಮಗಳು ಬಹಳ ಮುಖ್ಯ. ದಿನದಲ್ಲಿ ಸ್ವಲ್ಪ ಸಮಯವಾದರೂ ಯೋಗಕ್ಕೆ ಮೀಸಲಿಡುವುದರಿಂದ ರಕ್ತ ಪರಿಚಲನೆ ಸುಗಮವಾಗಿ ನಡೆದು, ಚರ್ಮಕ್ಕೆ ಹೊಳಪು ಬರುತ್ತದೆ. ಇದರಿಂದ ಯಾವುದೇ ಸೌಂದರ್ಯ ಸಾಮಗ್ರಿಗಳನ್ನು ಬಳಸುವ ಪ್ರಮೇಯ ಬರುವುದಿಲ್ಲ. ನಿಮ್ಮ ಫೇವರಿಟ್ ಸೆಲೆಬ್ರಿಟಿಗಳು ಸಹ ತಮ್ಮ ತ್ವಚೆ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗಿರುವುದನ್ನು, ಹೋಗುತ್ತಿರುವುದನ್ನು ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net