ಭೂ ಪರಿವರ್ತನಾ ಪೂರ್ವ ನಕ್ಷೆಗೆ ವಿನಾಯಿತಿ; ಏಕ ಮಾಲೀಕತ್ವ ಪಹಣಿಗೆ ಮಾತ್ರ ಆದೇಶ ಅನ್ವಯ

Land conversion
Published on

ಬೆಂಗಳೂರು: ಏಕ ಮಾಲೀಕತ್ವದ ಪಹಣಿಯಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಭೂಪರಿವರ್ತನೆ ಕೋರಿ ಸಲ್ಲಿಸುವ ಅರ್ಜಿಗಳಿಗೆ ಭೂಪರಿವರ್ತನಾ ಪೂರ್ವ ನಕ್ಷೆಗೆ ವಿನಾಯಿತಿ ನೀಡಿ ಸರ್ಕಾರ ಆದೇಶಿಸಿದೆ.

ಭೂ ಪರಿವರ್ತನಾ ಉದ್ದೇಶಕ್ಕಾಗಿ ಸಲ್ಲಿಸಬೇಕಾದ ಭೂ ಪರಿವರ್ತನಾ ನಕ್ಷೆಗಳನ್ನು ಕಡ್ಡಾಯವಾಗಿ ಮೋಜಿಣಿ ತಂತ್ರಾಂಶದ ಮೂಲಕವೇ ನಿರ್ವಹಿಸಲು ಮತ್ತು ಭೂಪರಿವರ್ತನೆ ಕೋರಿ ಸಲ್ಲಿಸಲಾಗುವ ಅರ್ಜಿಗಳಿಗೆ ಭೂಪರಿವರ್ತನಾ ಪೂರ್ವ ನಕ್ಷೆಯನ್ನು ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಆದರೆ, ಪ್ರಸ್ತುತ ಏಕಮಾಲೀಕತ್ವದ ಪಹಣಿಯಲ್ಲಿನ ಪೂರ್ವ ನಕ್ಷೆಯಿಂದ ವಿನಾಯಿತಿ ನೀಡಿದ ಮತ್ತು ಭೂಪರಿವರ್ತನಾ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net