ಟೋಲ್‌ಗೇಟ್‌ನಲ್ಲಿ ವಿನಾಯಿತಿ ಕೊಡಿ

toll
ಶಿವಮೊಗ್ಗ ತಾಲೂಕು ಕಲ್ಲಾಪುರ ಟೋಲ್‌ಗೇಟ್‌ನಲ್ಲಿ ನ್ಯಾಮತಿ ತಾಲೂಕಿನ ಜನರಿಗೆ ಟೋಲ್ ವಿನಾಯಿತಿ ನೀಡುವಂತೆ ಮಂಜು ನಾಯ್ಕ, ಪ್ರದೀಪ್, ಚೇತನ್, ಗೋಕುಲ್, ನಾಗರಾಜ ನಾಯ್ಕ ಮತ್ತಿತರರು ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ನ್ಯಾಮತಿ ತಾಲೂಕಿನಿಂದ ಪ್ರತಿದಿನ ಕಾರ್ಯನಿಮಿತ್ತ ಶಿವಮೊಗ್ಗ ತೆರಳುವವರಿಗೆ ಕಲ್ಲಾಪುರ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡಬೇಕು. ಅವರಿಂದ ಟೋಲ್ ಸಂಗ್ರಹ ಮಾಡಬಾರದು ಎಂದು ಒತ್ತಾಯಿಸಿ ಮಂಗಳವಾರ ನ್ಯಾಮತಿ ಬಂಜಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಾರ್ಯಪಾಲಕ ಇಂಜಿನಿಯರ್‌ಗೆ ಟೋಲ್‌ಗೇಟ್ ಬಳಿ ಮನವಿ ಸಲ್ಲಿಸಿದರು.

ನ್ಯಾಮತಿ ತಾಲೂಕಿಗೆ ಒಳಪಡುವ ಎಲ್ಲ ಗ್ರಾಮಗಳ ಜನರಿಗೂ ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು. ಪ್ರತಿದಿನ ಈ ಭಾಗದಿಂದ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಶಿವಮೊಗ್ಗಕ್ಕೆ ತೆರಳುತ್ತಾರೆ. ಇವರಿಗೆ ವಿನಾಯಿತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಮಂಜು ನಾಯ್ಕ, ಉಪಾಧ್ಯಕ್ಷ ಕಿರಣ್ ನಾಯ್ಕ, ಪ್ರಮುಖರಾದ ನಾಗರಾಜ್ ನಾಯ್ಕ, ರಾಮಾ ನಾಯ್ಕ, ಗೋಕುಲ್, ಪ್ರದೀಪ್, ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net