

Ex Swimmer Medals Stolen : ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ನನ್ನ ಪೂರ್ವಜರ ಮನೆಯಿಂದ ನಾನು ಗಳಿಸಿದ್ದ ಪದಕ ಹಾಗೂ ಸ್ಮರಣಿಕೆಗಳನ್ನು ಕಳ್ಳರು ಕದ್ದು ಕೊಂಡು ಹೋಗಿದ್ದಾರೆ ಎಂದು ಪದ್ಮಶ್ರೀ ಪುರಸ್ಕೃತ ಮಾಜಿ ಈಜುಗಾರ್ತಿ ಬುಲಾ ಚೌಧರಿ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಜಿ ಈಜುಗಾರ್ತಿ ಬುಲಾ ಚೌಧರಿ ಮಾತನಾಡಿ, ನಾನು ಎಸ್ಎಎಎಫ್ ಕ್ರೀಡಾಕೂಟದಲ್ಲಿ ಗೆದ್ದ 6 ಚಿನ್ನದ ಪದಕ ಹಾಗೂ ಪದ್ಮಶ್ರೀ ಬ್ರೂಚ್ ಸೇರಿದಂತೆ ಎಲ್ಲಾ ಪದಕಗಳನ್ನು ಕಳ್ಳರು ಕದಿದ್ದಾರೆ. ಆದರೆ ಸರ್ಜುನ ಪ್ರಶಸ್ತಿ ಹಾಗೂ ಟೆನ್ಸಿಂಗ್ ನಾರ್ಗೆ ಪದಕಗಳನ್ನು ಮುಟ್ಟಿಲ್ಲ. ಕಳ್ಳರ ಕಣ್ಣೀಗೆ ಇವುಗಳು ಬಿದ್ದಿಲ್ಲ. ಯಾಕೆಂದರೆ ಅವುಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿವೆ.. ಹೀಗಾಗಿ ಅವರಿಗೆ ಗುರುತಿಸಲು ಸಾಧ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ಈ ಎಲ್ಲ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದೇನು ಎಂದು ಹೇಳಿದ್ದಾರೆ.
"ಸ್ವಾತಂತ್ರ್ಯ ದಿನದಂದು ನಾನು ಮನೆಯನ್ನು ಸ್ವಚ್ಛಗೊಳಿಸಲು ಹೋದನು. ಒಳಗೆ ಹೋದಾಗ, ಹಿಂದಿನ ಗೇಟ್ ಮುರಿದು ಕೊಠಡಿಗಳು ಲೂಟಿಯಾಗಿರುವುದನ್ನು ನೋಡಿ ನನಗೆ ಭಯವಾಗಿತ್ತು. ನಾನು ಗಳಿಸಿದ್ದ ಪ್ರಶಸ್ತಿಗಳನ್ನು ನೋಡಿದಾಗ ಎಲ್ಲಾ ಕಳ್ಳತವಾಗಿರುವುದು ನನಗೆ ಗೊತ್ತಾಯಿತು ಎಂದಿದ್ದಾರೆ.
"ಅವರು ಪದಕಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ? ಅವರಿಗೆ ಯಾವುದೇ ಹಣ ಸಿಗುವುದಿಲ್ಲ. ಈ ಪದಕಗಳು ನನ್ನ ಜೀವನದ ಸಂಪತ್ತು, ನನ್ನ ವೃತ್ತಿಜೀವನದ ಫಲ. ನನ್ನ ಮನೆ ಖಾಲಿಯಾಗಿರುವುದರಿಂದ ಪ್ರತಿ ಬಾರಿಯೂ ಅದನ್ನು ಗುರಿಯಾಗಿಸಲಾಗುತ್ತದೆ" ಎಂದು ಅವರು ಹೇಳಿದರು.
ಶ್ರೀಮತಿ ಚೌಧರಿ ಅವರು ತಮ್ಮ ಹಿಂದ್‌ಮೋಟರ್ ನಿವಾಸದಲ್ಲಿ ಇದು ಮೂರನೇ ಕಳ್ಳತನವಾಗಿದ್ದು, ಅದನ್ನು ಲಾಕ್ನಲ್ಲಿ ಇಡಲಾಗಿತ್ತು. ಪ್ರಸ್ತುತ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಶ್ರೀಮತಿ ಚೌಧರಿ ಅವರ ಪೂರ್ವಜರ ಮನೆಯನ್ನು ಅವರ ಸಹೋದರ ಮಿಲನ್ ಚೌಧರಿ ನೋಡಿಕೊಳ್ಳುತ್ತಿದ್ದಾರೆ, ಅವರು ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸಮಯ ಸಿಕ್ಕಾಗ ಮಾತ್ರ ಈ ಮನೆಗೆ ಭೇಟಿ ನೀಡುತ್ತಾರೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.