ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿದ್ದಾನೆ, ಹೀಗಾಗಿ ಬೊಗಳ್ತಿದ್ದಾನೆ! 2006ರಲ್ಲಿ ನಡೆದ ಘಟನೆ ಬಹಿರಂಗ ಪಡಿಸಿದ ಇರ್ಫಾನ್ ಪಠಾಣ್ ..Shahid Afridi

shahid afridi
Published on

Shahid Afridi :ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ನಾಯಿ ಮಾಂಸ ತಿಂದಿದ್ದಾನೆ, ಹೀಗಾಗಿ ಬೊಗಳುತ್ತಿದ್ದಾನೆ ಎಂದು ಭಾರತದ ಮಾಜಿ ಆಲ್​ರೌಂಡರ್​ ಆಗಿರುವ ಇರ್ಫಾನ್ ಪಠಾಣ್ ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ಪಠಾಣ್ ಖಾಸಗಿವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಾ, 2006 ರಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ಎರಡೂ ತಂಡಗಳ ಆಟಗಾರರು ಕರಾಚಿಯಿಂದ ಲಾಹೋರ್‌ಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದೇವು. ಶಾಹಿದ್ ಅಫ್ರಿದಿ ನನ್ನ ಪಕ್ಕದಲ್ಲೇ ಕುಳಿತಿದ್ದರು. ಅಫ್ರಿದಿ ನನ್ನ ತಲೆಯ ಮೇಲೆ ಕೈ ಇಟ್ಟು ನನ್ನ ಹೇರ್​​ ಸ್ಟೈಲ್​​ ಹಾಳುಮಾಡಿದರು. ಅವರು ನನ್ನನ್ನು ಕೇಳಿದರು, 'ಹೇಗಿದ್ದೀಯ ಮಗು?' ನಾನು, ' (ನೀವು ಯಾವಾಗಿನಿಂದ ನನ್ನ ತಂದೆಯಾದಿರಿ?)' ಎಂದು ಕೇಳಿದೆ". ಬಾಲಿಶ ವರ್ತನೆ ಅವನದೇ ಆಗಿತ್ತು. ಅದಾದ ನಂತರ, ಅಫ್ರಿದಿ ನನಗೆ ಕೆಲವು ಅವಾಚ್ಯ ಶಬ್ದಗಳನ್ನು ಹೇಳಿದ್ದನು. ಅಲ್ಲಿಯೇ ಮಾಜಿ ಕ್ರಿಕೆಟಿಗರ ನಡುವೆ ವಾಗ್ವಾದ ನಡೆಯಿತು, ಏಕೆಂದರೆ ಅಫ್ರಿದಿ ತನ್ನ ಕೂದಲನ್ನು ಅಸ್ತವ್ಯಸ್ತಗೊಳಿಸಿ ಮಗು ಎಂದು ಕರೆಯುವ ಮೂಲಕ ಇದನ್ನು ಪ್ರಾರಂಭಿಸಿದರು ಎಂದು ಪಠಾಣ್ ಹೇಳಿದ್ದಾರೆ.

"ಆಗ ಅಬ್ದುಲ್ ರಜಾಕ್ ನನ್ನ ಜೊತೆ ಕುಳಿತಿದ್ದರು. ನಾನು ಅವರನ್ನು ಇಲ್ಲಿ ಯಾವ ರೀತಿಯ ಮಾಂಸ ಲಭ್ಯವಿದೆ ಎಂದು ಕೇಳಿದೆ. ಅವರು ವಿವಿಧ ರೀತಿಯ ಮಾಂಸದ ಬಗ್ಗೆ ಹೇಳಿದರು. ನಂತರ ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ಅಫ್ರಿದಿ ಅಲ್ಲಿಯೇ ಕುಳಿತಿದ್ದರು. ಇದನ್ನು ಕೇಳಿ ರಜಾಕ್ ಆಘಾತಕ್ಕೊಳಗಾದರು ಮತ್ತು 'ಹೇ ಇರ್ಫಾನ್, ನೀವು ಯಾಕೆ ಹೀಗೆ ಹೇಳುತ್ತಿದ್ದೀರಿ?' ಎಂದು ಕೇಳಿದರು," ಎಂದಿದ್ದಾರೆ.

"ನಾನು ಹೇಳಿದೆ, 'ಅವನು (ಅಫ್ರಿದಿ) ನಾಯಿ ಮಾಂಸ ತಿಂದಿದ್ದಾನೆ, ನಾನು ತುಂಬಾ ಸಮಯದಿಂದ ನೋಡುತ್ತಿದ್ದೇನೆ ಬಹಳ ಸಮಯದಿಂದ ಬೊಗಳುತ್ತಿದ್ದಾನೆ'. ಅದಾದ ನಂತರ, ಅಫ್ರಿದಿಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಅವನು ಏನೇ ಹೇಳಿದ್ದರೂ, ನಾನು ಹೇಳುತ್ತಿದ್ದೆ, 'ನೋಡಿ, ಅವನು ಮತ್ತೆ ಬೊಗಳುತ್ತಿದ್ದಾನೆ' ಎಂದು. ಇದಾದ ನಂತರ, ಅವನು ವಿಮಾನದ ಉದ್ದಕ್ಕೂ ಮೌನವಾಗಿದ್ದನು," ಎಂದು ಪಠಾಣ್ ಹೇಳಿದರು.

"ಈ ಘಟನೆಯಿಂದ, ಅವರು ನನ್ನ ವಿರುದ್ಧ ಮಾತಿನಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡರು. ಅದಕ್ಕಾಗಿಯೇ ಅವರು ಮತ್ತೆ ನನಗೆ ಏನನ್ನೂ ಹೇಳಲಿಲ್ಲ. ನಾನು ಶಾಹಿದ್ ಅಫ್ರಿದಿಯನ್ನು 11 ಬಾರಿ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net