ರಷ್ಯಾ ಮಾಜಿ ಸಚಿವ ಆತ್ಮಹತ್ಯೆ

4-686c07f2626da
Published on

ಮಾಸ್ಕೋ: ಸುಮಾರು ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯದಿಂದ ರಷ್ಯಾದ ಸಾರಿಗೆ ಸಚಿವರಾಗಿದ್ದ ರೋಮನ್ ಸ್ಟಾರೋವೊೖಟ್ ಸೋಮವಾರ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವ ಹುದ್ದೆಯಿಂದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ವಜಾ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಟಾರೋವೊೖಟ್ ಸಾವಿಗೆ ಶರಣಾಗಿದ್ದಾರೆ.

ವಜಾ ನಿರ್ಧಾರ ಪ್ರಕಟಣೆಯಾದ ನಂತರ ಮಾಸ್ಕೋದ ಉಪನಗರವೊಂದರಲ್ಲಿ ಸ್ಟಾರೋವೊೖಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವಜಾಗೊಂಡ ಸಚಿವನ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆಯೆಂದು ದೇಶದ ತನಿಖಾ ಸಮಿತಿ ಹೇಳಿದೆ. ಸಾವಿನ ಸುದ್ದಿಯನ್ನು ದೇಶದ ಅಧಿಕೃತ ಪೋರ್ಟಲ್​ನಲ್ಲಿ ಪ್ರಕಟಿಸಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣವೇನೆಂದು ಅವರು ಸ್ಪಷ್ಟಪಡಿಸಿಲ್ಲ. ನೊವೊಗೊರೊಡ್ ಪ್ರಾಂತ್ಯದ ಮಾಜಿ ರಾಜ್ಯಪಾಲ ಅಂಡ್ರೆ ನಿಕಿಟಿನ್​ರನ್ನು ಹಂಗಾಮಿ ಸಾರಿಗೆ ಸಚಿವರಾಗಿ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net