ಮಾಜಿ ಶಾಸಕನನ್ನು ಕೋಲಿನಿಂದ ಹೊಡೆದು ಹತ್ಯೆ ಮಾಡಿದ ದುಷ್ಕರ್ಮಿಗಳು

Former MLA
Published on

ಲಕ್ಷ್ಮೀಪುರ ಖೇರಿ: ಉತ್ತರ ಪ್ರದೇಶದ ಮಾಜಿ ಶಾಸಕ ನಿರ್ವೇಂದ್ರ ಕುಮಾರ್​ ಮುನ್ನಾ ಅವರ ಹತ್ಯೆಯಾಗಿದೆ.

ಇವರು ನಿಘಾಸನ್ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು.

ಭೂವಿವಾದಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಮಾಜಿ ಶಾಸಕನನ್ನು ದುಷ್ಕರ್ಮಿಗಳು ಹೊಡೆದು ಕೊಂದಿದ್ದಾರೆ. ಭೂಮಿಗೆ ಸಂಬಂಧಪಟ್ಟಂತೆ ಮೊದಲು ಸಣ್ಣ ಗಲಾಟೆಯಾಯಿತು. ಆದರೆ ಪರಿಸ್ಥಿತಿ ಉಲ್ಬಣಗೊಂಡು ನಿರ್ವೇಂದ್ರ ಕುಮಾರ್​ ಅವರು ಗಂಭೀರ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಭೂಮಿಗೆ ಸಂಬಂಧಪಟ್ಟ ವಿವಾದ ಕೋರ್ಟ್​​ನಲ್ಲಿದೆ.  ಇದನ್ನೂ ಓದಿ: ಶತಮಾನದಷ್ಟು ಹಳೆಯ ಅಮರಾವತಿ ರಥ ಬೆಂಕಿಗಾಹುತಿ: ಪತ್ತೆಯಾಗದ ಕಾರಣ

ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಬಂದವರನ್ನು ನಿರ್ವೇಂದ್ರ ಕುಮಾರ್​ ತಡೆಯಲು ಯತ್ನಿಸಿದಾಗ ಅವರಿಗೆ ಕೋಲಿನಿಂದ ಹೊಡೆದಿದ್ದಾರೆ. ನಿರ್ವೇಂದ್ರ ಕುಮಾರ್​ ಅವರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಸಾವನ್ನಪ್ಪಿದ್ದಾರೆ. ಇವರ ಮಗ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net