ಕರ್ತವ್ಯ ನಿರತ ಪೊಲೀಸ್​ ಮೇಲೆ ಹಲ್ಲೆ ಮಾಡಿದ ಮಾಜಿ ಕಾರ್ಪೊರೇಟರ್​ ಬಂಧನ

police corporartor
Published on

ಬೆಂಗಳೂರು: ಇಲ್ಲೊಬ್ಬ ಮಾಜಿ ಕಾರ್ಪೊರೇಟರ್​ವ ಕರ್ತವ್ಯ ನಿರತ ಸರ್ಕಲ್ ಇನ್ಸ್ಪೆಕ್ಟರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ ಮಾಡಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ.

ಮಾಜಿ ಕಾರ್ಪೋರೇಟರ್ ಆಗಿದ್ದ ವಿ ಬಾಲಕೃಷ್ಣ ಎಂಬುವವರನ್ನು ಕರ್ತಯವ್ಯ ನಿರತ ಪೊಲೀಸ್​ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಂಧಿಸಲಾಗಿದ್ದು ಇವರು ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್​ನಲ್ಲಿ ಹಿಂದೆ ಕಾರ್ಪೋರೇಟರ್ ಆಗಿದ್ದರು. ಇವರನ್ನು ರಾಮನಗರ ಜಿಲ್ಲೆ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ನಿನ್ನೆ ಬಾಲಕೃಷ್ಣ ಸಂಜೆ ಕಗ್ಗಲೀಪುರ ಠಾಣೆಗೆ ತೆರಳಿದ್ದರು. ಇದೇ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೆ ಸಿಟ್ಟಿಗೆದ್ದ ಮಾಜಿ ಕಾರ್ಪೊರೇಟರ್​ ಬಾಲಕೃಷ್ಣ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾನೆ.

ತಕ್ಷಣವೇ ಬಾಲಕೃಷ್ಣನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ನೀಡಿದ ದೂರು ಆಧರಿಸಿ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 353, 332 ಅಡಿ ಪ್ರಕರಣ ದಾಖಲಿಸಲಾಗಿದ್ದು IPC section 353ರ ಪ್ರಕಾರ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, IPC section 332 ಪ್ರಕಾರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಂದು ದೂರು ದಾಖಲಿಸಿದ ಪೊಲೀಸರು ಆರೋಪಿ ಮಾಜಿ ಕಾರ್ಪೋರೇಟರ್ ಬಾಲಕೃಷ್ಣನನ್ನು ಬಂಧಿಸಿದ್ದಾರೆ.

ಆರೋಪಿ ಬಾಲಕೃಷ್ಣನನ್ನು ವೈದ್ಯಕೀಯ ತಪಾಸಣೆ ನಡೆಸಿ ಠಾಣೆಗೆ ಕರೆದುಕೊಂಡು ಬಂದ ಪೊಲೀಸರು ಇಂದು ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net