ಮೋದಿಯವರೇ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ: ಸಿದ್ದರಾಮಯ್ಯ

Siddaramaiah Modi
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ.

ಇನ್ನು ಪ್ರಧಾನಿ ಮೋದಿ ರಾಜ್ಯ ಪ್ರವಾಸ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಪ್ರಶ್ನೆಗಳನ್ನು ಕೇಳಿ #AnswerMadimodi ಎಂದು ಸವಾಲೆಸೆದಿದ್ದಾರೆ.

ನ್ಯಾಯ ಕೊಡಿಸಿ

ಕರೋನ ವೇಳೆ ರಾಜ್ಯ ಸರ್ಕಾರ 3,000 ಸಾವಿರ ಕೋಟಿ ಲೂಟಿ ಮಾಡಿದೆ. ಮಾಸ್ಕ್ ಸ್ಯಾನಿಟೇಜರ್, ವೆಂಟಿಲೇಟರ್ ಲೂಟಿ ನಡೆದಿದೆ ಸತ್ತ ಆತ್ಮಗಳು‌ ನಿಮ್ಮ ನ್ಯಾಯಕ್ಕಾಗಿ ಕಾಯುತ್ತಿವೆ. ಗುತ್ತಿಗೆದಾರ ಅಮರಗೋಳ ಸರ್ಕಾರ ಬಿಲ್ ನೀಡಿಲ್ಲ ಅಂದ್ರು ದಯಾಮರಣಕ್ಕೆ ಪತ್ರ ನಿಮಗೆ ಬರೆದಿದ್ರು ಈತನಿಗೆ ನ್ಯಾಯ ಕೊಡಿಸಬೇಕಾಗಿದ್ದು ನೀವೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪರಮೇಶ್ವರ್ ಮೆಸ್ತಾಗೆ ಕುಟುಂಬಕ್ಕೆ ನ್ಯಾಯ ಬೇಕು ಪಿಎಸ್ಐ ಹಗರಣದಿಂದ ಯುವಕರು ಕೆಲಸದಿಂದ ವಂಚಿತರಾಗಿದ್ದಾರೆ ಯಾವುದೇ ಹುದ್ದೆಗಳು ಭರ್ತಿಯಾಗುತ್ತಿಲ್ಲ ಕೆಲಸದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಿ ಎಂದಯ ಆಗ್ರಹಿಸಿದ್ದಾರೆ.

ಸಾಮಾನ್ಯ ಜನರ ಕಥೆ ಏನು?

40% ಕಮಿಷನ್​ಗೆ ಗುತ್ತಿಗೆದಾರ ಪ್ರಸಾದ್ ಬಲಿಯಾದ ಈ‌ ಸಾವಿನ ಸರಣಿಗೆ ನ್ಯಾಯ ಕೊಡಿಸುವುದು ಯಾರು. ಸಂತೋಷ ಪಾಟೀಲ್ ಬದಕಿದ್ದಾಗ ನ್ಯಾಯ ಕೊಡಲಿಲ್ಲ ಸತ್ತ ಮೇಲಾದ್ರು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಲ್ಲವೇ.

ಕೆಆರ್ ಪುರಂ ಇನ್ಸ್‌ಪೆಕ್ಟರ್ 80 ಲಕ್ಷ ಕೊಟ್ಟು‌ ವರ್ಗಾವಣೆ ಮಾಡಿಸಿಕೊಂಡಿದ್ದರು. ಈ ವಿಚಾರ ಸಚಿವ ಎಂಟಿಬಿ ನಾಗರಾಜ್ ಬಹಿರಂಗ ‌ಮಾಡಿದ್ರು ಜನರಿಗೆ ರಕ್ಷಣೆ ನೀಡುವ ಪೊಲೀಸ್ ಗೆ ವಂಚನೆ ಆಗಿದೆ ಸಾಮಾನ್ಯ ಜನರ ಕತೆ ಎನು ಮೋದಿಯವರೆ ಎಂದು ಪ್ರಶ್ನಿಸಿದ್ದಾರೆ.

ಯಾಕಿಷ್ಟು ದ್ವೇಷ

ಬೆಂಗಳೂರು ಉಪನಗರ ರೈಲು , ಮೆಟ್ರೋ ಗೆ ಕೇಂದ್ರ ಬಜೆಟ್ ನಲ್ಲಿ ನಿರ್ಲಕ್ಷ್ಯವಾಗಿದೆ ಮೋದಿಯವರೇ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ.

ಉಚಿತ ಸಿಲಿಂಡರ್ ಅಂತ ಸುಳ್ಳು ಆಸ್ವಾಸನೆ ನೀಡಿ ಅಧಿಕಾರಕ್ಕೆ ಬಂದ್ರಿ ಸಿಲಿಂಡರ್ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಜನರು ಮತ್ತೆ ಸೌದೆ ಓಲೆ ಉರಿಸಿಕೊಳ್ಳುತ್ತಿದ್ದಾರೆ. ರೈತರು ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆರೈತರ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದಾರೆ ಮೋದಿ ಅವರೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net