

ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಭಾವುಕರಾಗಿ ಮಾತನಾಡುತ್ತ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನೂ ನೆನಪಿಸಿಕೊಂಡು ಕಾಂಗ್ರೆಸ್ಸಿನ ಪ್ರಭಾವಿಗಳ ವಿರುದ್ಧ ಪರೋಕ್ಷವಾಗಿ ಗುಡುಗಿದರು.
ಧರ್ಮೇಗೌಡ ವಿರುದ್ಧ ಚಾರ್ಜ್ ಮಾಡಿ ಆ ಹೆಣ್ಣು ಮಗಳ ಕೈನಲ್ಲಿ ಪತ್ರ ಬರೆಸಿದ್ರು. ನಮ್ಮ ಎಂ ಎಲ್ ಸಿ ಅನ್ನ ಸಮಿತಿಗೆ ಬೇರೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ಬಹಳ ಪ್ರಾಮಾಣಿಕ ಎಂಎಲ್ಸಿ. ಇವರು ನಿಜವಾದ ಧರ್ಮರಾಯ, ಬೋಜೆಗೌಡ ಬಹಳ ಧೈರ್ಯಶಾಲಿ. ನಾನು ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ,ಕೃಷ್ಣ ಅವರ ಅಳಿಯ ಸಿದ್ಧಾರ್ಥ ಸಾವಿಗೀಡಾದ ಸಂದರ್ಭ ಎಲ್ಲರಿಗೂ ಗೊತ್ತು. ಅವರಿಗೆ ಈಜು ಕೂಡ ಬರುತ್ತಿತ್ತು. ಆ ಘಟನೆ ಏನಾಗಿತ್ತು ಎಂಬುದೂ ಗೊತ್ತು.
ರಾಜಕಾರಣಿಗಳೆಲ್ಲರೂ ಕಟುಕರಲ್ಲ, ಮಾನಮರ್ಯಾದೆ ಬಿಟ್ಟವರೂ ಇದ್ದಾರೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಅರಾಜಕತೆ ಮಾಡೊದು ಬೇಡ. ಬಹುಮತ ಇಲ್ಲ ಅಂದ್ರೂ ಯಾಕೆ ಅಂದು ಆ ರಾದ್ಧಾಂತ ಮಾಡಿದ್ರು. ಈ ಘಟನೆಗೆ ಕಾರಣ ಏನ್ ಇದೆ ಅದು ತನಿಖೆ ಮಾಡಬೇಕು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..