More

    ‘ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ, ನಾವೆಲ್ಲ ಸೇರಿ ಮಾಡಿರುವ ಕೊಲೆ ಇದು..’

    ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡರ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವ ಪಡೆದುಕೊಂಡಿದ್ದು, ಜೆಡಿಎಸ್ ವರಿಷ್ಠ ದೇವೇಗೌಡರು ಗದ್ಗದಿತರಾದ ಬಳಿಕ, ಇದೀಗ ಎಚ್​.ಡಿ.ಕುಮಾರಸ್ವಾಮಿ ನೋವು ತೋಡಿಕೊಂಡಿರುವುದು ಹೀಗೆ..

    ನನ್ನ ಜೀವನದ ಅತ್ಯಂತ ಮರೆಯಲು ಆಗದ ದುರಂತ ದಿ‌ನ ಇದು. ಹಲವಾರು ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಇವತ್ತಿನ ಧರ್ಮಣ್ಣನ ಸಾವು ಆತ್ಮಹತ್ಯೆ ಅಂತ ಹೇಳಲ್ಲ, ಇವತ್ತು ನಡೆದಿರುವ ರಾಜಕೀಯದ ಕೊಲೆ ಇದು. ಈ ಘಟನೆ ಸಹಿಸಿಕೊಳ್ಳಲು ಸಾಧ್ಯ ಇಲ್ಲ. ನನ್ನ ಕುಟುಂಬದ ಒಡಹುಟ್ಟಿದವನ ಮರಣವಿದು.
    ಅವರ ತಂದೆ 2004ರಲ್ಲಿ ಬೀರೂರಿನಿಂದ ಆಯ್ಕೆ ಆಗಿದ್ರು. ನಾನು ಸಾಯುವ ಮುನ್ನ ನನ್ನ ಮಗ ಮಂತ್ರಿ ಆಗಬೇಕು ಎಂದು ಅವರು ಕನಸು ಕಂಡಿದ್ರು. ಅದನ್ನು ನನಸಾಗಿಸಲು ಉಪಸಭಾಪತಿಯಾದ್ರು ಮಾಡೋಣ ಅಂತ ಮಾಡಿದೆ. ಉಪ ಸಭಾಪತಿ ಮಾಡಿದ್ದೆ ತಪ್ಪಾಯ್ತೇನೊ ಎಂಬ ಭಾವ ನನ್ನನ್ನೀಗ ಕಾಡತೊಡಗಿದೆ.

    ಅವತ್ತು ಈ ಇಬ್ಬರು ಅಣ್ಣ ತಮ್ಮಂದಿರನ್ನು ಕಾಂಗ್ರೆಸ್​ಗೆ ಕರೆಸಿಕೊಳ್ಳಲು ಪ್ರಯತ್ನ ಮಾಡಿದ್ರು. ಆದರೆ, ಅವರು ಕಾಂಗ್ರೆಸ್​ಗೆ ಹೋಗಲ್ಲ ಅಂದ್ರು. ಆವತ್ತು ಕುಮಾರಣ್ಣ ಬೇಕಾ, ಎಂಎಲ್ಎ ಸ್ಥಾನ ಬೇಕಾ ಎಂದು ಸಹೋದರರನ್ನು ಕೇಳಿದ್ದೆ. ಅದಕ್ಕೆ ಅವರು ಉಳಿದುಕೊಂಡಿದ್ರು. ಅವರ ತಂದೆ ಮಾತು ಉಳಿಸಿಕೊಳ್ಳಲು, ಉಪಸಭಾಪತಿಯನ್ನಾದ್ರೂ ಮಾಡಿ ಬಿಡೋಣ ಅಂತ ಮಾಡಿದೆ. ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ.

    ಇದನ್ನೂ ಓದಿ: ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..

    ಆ ಮನುಷ್ಯ ಇವತ್ತು ಆತ್ಮಹತ್ಯೆ ಮಾಡಿಕೊಂಡಿಲ್ಲ. ನಮ್ಮ ರಾಜಕೀಯದ ತೆವಲಿಗೆ ಇಂತವರ ಕೊಲೆ ಆಗ್ತಿದೆ. ಒಬ್ಬ ರಾಜಕೀಯ ಮುಖಂಡರು ದೇವೇಗೌಡರ ಸೆಕ್ಯುಲರಿಸಂ ಬಗ್ಗೆ ಪ್ರಶ್ನೆ ಮಾಡಿದ್ರು. ಅವತ್ತಿನ ಪರಿಷತ್ ಘಟನೆ ಬಗ್ಗೆ ನೀವು ಬಿಂಬಿಸುವ ಕೆಲಸ ಮಾಡಿದ್ರಿ. ಅದರ ಪರಿಣಾಮ ಇದು. ಬೋಜೇಗೌಡ ಫೋನ್ ಮಾಡಿ ಅಣ್ಣ ನಮ್ಮ ಅಣ್ಣನಿಗೆ ಧೈರ್ಯ ಹೇಳಿ ಎಂದು ಹೇಳಿದ್ದ. ಅಣ್ಣ ಏನಾದ್ರು ಮಾಡಿಕೊಳ್ತಾನಾ ಎಂದೂ ಕೇಳಿದ್ದೆ. ಸದನದಲ್ಲಿ ನಿನ್ನ ತಪ್ಪೇನೂ ಇಲ್ಲ ಅಂತ ಹೇಳಿದ್ದೆ. ದೇವೇಗೌಡರು, ನಾನು ಇಬ್ಬರೂ ಅವರಿಗೆ ಧೈರ್ಯ ತುಂಬಿದ್ದೆವು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ‘ಮಾನಸಿಕವಾಗಿ ಕುಗ್ಗಿದ್ದರು ಧರ್ಮೇಗೌಡರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts