'ಮಾನಸಿಕವಾಗಿ ಕುಗ್ಗಿದ್ದರು ಧರ್ಮೇಗೌಡರು'

DEVEGOUDA
Published on

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್.ಧರ್ಮೇಗೌಡರ ಆತ್ಮಹತ್ಯೆ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಳ್ಳತೊಡಗಿದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ದಿಗ್ಭ್ರಮೆಯಿಂದ ಹೊರಬಂದು ಧರ್ಮೇಗೌಡರ ಭೇಟಿಯನ್ನು ಸ್ಮರಿಸಿಕೊಂಡು ಹೇಳಿದ್ದಿಷ್ಟು

ಡಿಸೆಂಬರ್ 15ರಂದು ವಿಧಾನ ಪರಿಷತ್ತಿಗೆ ಹೋಗುವ ಮುನ್ನ ಅವರು ನನ್ನನ್ನು ಭೇಟಿ ಮಾಡಿದ್ದರು. ಅವರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು. ಮನದ ನೋವನ್ನು ಯಾರಿಗೂ ತೋರಿಸಿಕೊಳ್ಳದ ವ್ಯಕ್ತಿ ಆತ. ಸಭಾಪತಿ ಆಗಿ ನಿಮ್ಮ ಸ್ಥಾನದಲ್ಲಿ ಯಾರ ಬಲವಂತಕ್ಕೂ ಕೂರಬೇಡಿ ಎಂದಿದ್ದೆ. ಪರಿಷತ್ ಗಲಾಟೆ ಅವರ ಮೇಲೆ ಬಹಳ ಪ್ರಭಾವ ಬೀರಿದೆ.

ರಾಜಕೀಯದ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾರದ ನೋವು ಅನುಭವಿಸಿದ್ದಾರೆ. ಅದರಿಂದ ಹೊರಬರಲು ನಾನು ಕೆಲವು ಸಲಹೆ ಕೊಟ್ಟಿದ್ದೆ. ಆದಾಗ್ಯೂ, ಕೊನೆ ದಿನಗಳಲ್ಲಿ ನಡೆದ ಘಟನೆಯಿಂದ ನೊಂದುಕೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net