More

    ಕಾಫಿ ಡೇ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ಎಚ್​ಡಿಕೆ ನೆನಪಿಸಿಕೊಂಡದ್ದೇಕೆ?

    ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಭಾವುಕರಾಗಿ ಮಾತನಾಡುತ್ತ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನೂ ನೆನಪಿಸಿಕೊಂಡು ಕಾಂಗ್ರೆಸ್ಸಿನ ಪ್ರಭಾವಿಗಳ ವಿರುದ್ಧ ಪರೋಕ್ಷವಾಗಿ ಗುಡುಗಿದರು.

    ಕಾಫಿ ಡೇ ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣವನ್ನು ಎಚ್​ಡಿಕೆ ನೆನಪಿಸಿಕೊಂಡದ್ದೇಕೆ?ಕುಮಾರ ಸ್ವಾಮಿ ಹೇಳಿದ್ದಿಷ್ಟು – ಪರಿಷತ್ ಇತಿಹಾಸದಲ್ಲಿ ಇದು ಅತ್ಯಂತ ಕರಾಳ ದಿನ. ಆ ವ್ಯಕ್ತಿ ಕಾನೂನಿನ ವಿರುದ್ಧ ಯಾವತ್ತು ನಡೆದುಕೊಂಡಿರಲಿಲ್ಲ. ಅವರನ್ನು ಒತ್ತಡದಿಂದ ಆ ಚೇರ್ ಗೆ ಕೂರಿಸಿದ್ದರೂ ಅವರು ಒಪ್ಪಿರಲಿಲ್ಲ. ಅವರನ್ನು ಒತ್ತಡ ಮಾಡಿ ಅವರನ್ನು ಕರೆದುಕೊಂಡು ಹೋಗಿ ಕೂರಿಸಿದ್ರು ಎಂದು ಅಪ್ಪಾಜಿ ಹೇಳಿದ್ರು. ಇತಿಹಾಸದಲ್ಲಿ ಸದನದಲ್ಲಿ ಈ ರೀತಿಯಲ್ಲಿ ಘಟನೆ ಆಗದ ಹಾಗೆ ನೋಡಿಕೊಳ್ಳಿ.

    ಇದನ್ನೂ ಓದಿ: ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..

    ಧರ್ಮೇಗೌಡ ವಿರುದ್ಧ ಚಾರ್ಜ್ ಮಾಡಿ ಆ ಹೆಣ್ಣು ಮಗಳ ಕೈನಲ್ಲಿ ಪತ್ರ ಬರೆಸಿದ್ರು. ನಮ್ಮ ಎಂ ಎಲ್ ಸಿ ಅನ್ನ ಸಮಿತಿಗೆ ಬೇರೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ಬಹಳ ಪ್ರಾಮಾಣಿಕ ಎಂಎಲ್​ಸಿ. ಇವರು ನಿಜವಾದ ಧರ್ಮರಾಯ, ಬೋಜೆಗೌಡ ಬಹಳ ಧೈರ್ಯಶಾಲಿ. ನಾನು ನಿಜವಾದ ಧರ್ಮರಾಯನನ್ನು ಕಳೆದುಕೊಂಡಿದ್ದೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ,ಕೃಷ್ಣ ಅವರ ಅಳಿಯ ಸಿದ್ಧಾರ್ಥ ಸಾವಿಗೀಡಾದ ಸಂದರ್ಭ ಎಲ್ಲರಿಗೂ ಗೊತ್ತು. ಅವರಿಗೆ ಈಜು ಕೂಡ ಬರುತ್ತಿತ್ತು. ಆ ಘಟನೆ ಏನಾಗಿತ್ತು ಎಂಬುದೂ ಗೊತ್ತು.

    ರಾಜಕಾರಣಿಗಳೆಲ್ಲರೂ ಕಟುಕರಲ್ಲ, ಮಾನಮರ್ಯಾದೆ ಬಿಟ್ಟವರೂ ಇದ್ದಾರೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಅರಾಜಕತೆ ಮಾಡೊದು ಬೇಡ. ಬಹುಮತ ಇಲ್ಲ ಅಂದ್ರೂ ಯಾಕೆ ಅಂದು ಆ ರಾದ್ಧಾಂತ ಮಾಡಿದ್ರು. ಈ ಘಟನೆಗೆ ಕಾರಣ ಏನ್ ಇದೆ ಅದು ತನಿಖೆ ಮಾಡಬೇಕು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ‘ಆತ್ಮಹತ್ಯೆ ಅಲ್ಲ, ರಾಜಕೀಯ ಕೊಲೆ, ನಾವೆಲ್ಲ ಸೇರಿ ಮಾಡಿರುವ ಕೊಲೆ ಇದು..’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts