ಜನರ ಸಮಸ್ಯೆಗಳನ್ನು ಆಲಿಸಲು ನೀವೂ ಬನ್ನಿ ನಾನು ಬರುತ್ತೇನೆ; ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ಮಾಜಿ ಸಿಎಂ ಯಡಿಯೂರಪ್ಪ ಆಹ್ವಾನ

BSY DK
Published on

ಬೆಂಗಳೂರು: ವಿರೋಧ ಪಕ್ಷದವರು ಎಂಬ ಕಾರಣಕ್ಕೆ ಅನುದಾನವನ್ನು ನಿಲ್ಲಿಸಿದ್ದೀರಿ. ಜನರ ಸಮಸ್ಯೆಗಳನ್ನು ಆಲಿಸಲು ನೀವೂ ಬನ್ನಿ ನಾನು ಬರುತ್ತೇನೆ ಆಗ ನಿಮಗೆ ಸಮಸ್ಯೆ ಅರ್ಥವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಹ್ವಾನಿಸಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶೀಲಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್​ವೈ ಸರ್ಕಾರದಿಂದ ಅನುದಾನ ಏಕೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

BSY Rounds

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪೀಣ್ಯ ಕೈಗಾರಿಕಾ ಪ್ರದೇಶ, ನೆಲಗೆದರನಹಳ್ಳಿ ಮುಖ್ಯರಸ್ತೆ, ಸಪ್ತಗಿರಿ ಕಾಲೇಜು ಹಿಂಭಾಗ ರಸ್ತೆ, ಚಿಕ್ಕಬಾಣಾವರ ಕೆರೆ ವೀಕ್ಷಿಸಿದ ಮಾಜಿ ಸಿಎಂ ಬಿಎಸ್​ವೈ, ಶಿವಕುಮಾರ್​ ಅವರೇ ನೀವು ಬೆಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದೀರಿ. ಪ್ರತಿನಿತ್ಯ ಇಲ್ಲೇ ಓಡಾಡುತ್ತೀರಾ. ಆದರೂ ಇದುವರೆಗೂ ಏಕೆ ಅನುದಾನ ಒದಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆಯೇ ಎಂಬುದರ ವಾಸ್ತವಾಂಶವನ್ನು ಜನತೆಗೆ ತಿಳಿಸಿ.

ಬ್ರ್ಯಾಂಡ್​ ಬೆಂಗಳೂರು ಎಂದು ಸುಮ್ಮನೆ ಬೊಗಳೆ ಬಿಡುವುದಲ್ಲ. ಜನರ ಮಧ್ಯೆ ಬಂದು ಸಮಸ್ಯೆಯನ್ನು ಆಲಿಸಿ. ಎಲ್ಲಾ ಕಡೆ ಬರ ಆವರಿಸಿದೆ. ಬರದ ಬಗ್ಗೆ ಅಧ್ಯಯನ ನಡೆಯುತ್ತಿದ್ದು, ಅದರ ವರದಿ ತಯಾರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ದಾಸರಹಳ್ಳಿ ಕ್ಷೇತ್ರ ವೀಕ್ಷಣೆ ಬಳಿಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net