More

    ಮತ್ತೊಮ್ಮೆ ಪಾಕ್​ ಕಾಲೆಳೆದ ಸೆಹ್ವಾಗ್​; ಈ ಬಾರಿ ಟೀಕಿಸಿದ್ದು, ಇದೇ ವಿಚಾರಕ್ಕೆ

    ನವದೆಹಲಿ: ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ತನ್ನ ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ತಂಡವು ತೀವ್ರ ಟೀಕೆಗೆ ಗುರಿಯಾಗಿದ್ದು, ಸೆಮಿಫಿನಾಲೆ ಪ್ರವೇಶಿಸಲೇಬೇಕೆಂಬ ಹಂಬಲದೊಂದಿಗೆ ಶನಿವಾರ ತನ್ನ ಲೀಗ್​ ಹಂತದ ಕೊನೆಯ ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಜಯಗಳಿಸಿ ತನ್ನ ಸೆಮೀಸ್​ ಆಸೆಯನ್ನು ಜೀವಂತವಾಗಿಸಿಕೊಳ್ಳಬೇಕಿದೆ.

    ಇದೇ ವೇಳೆ ಪಾಕಿಸ್ತಾನದ ವಿರುದ್ಧ ತಮ್ಮ ಟೀಕಾಪ್ರಹಾರವನ್ನು ಮುಂದುವರೆಸಿರುವ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ದೂಷಿಸುವ, ಹಾಸ್ಯಾಸ್ಪದ ಆರೋಪ ಮಾಡುವ ಪಾಕ್​ ಈ ಭಾರಿ ಏನು ಹೇಳುತ್ತದೆ ಎಂದು ನೋಡಬೇಕಿದೆ ಎಂದಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಸೆಹ್ವಾಗ್, 21ನೇ ಶತಮಾನದಲ್ಲಿ ನಡೆದ 6 ಏಕದಿನ ವಿಶ್ವಕಪ್​ಗಳಲ್ಲಿ ನಾವು 2007ರಲ್ಲಿ ಮಾತ್ರ ಸೆಮಿಫಿನಾಲೆ ಪ್ರವೇಶಿಸಲು ವಿಫಲರಾದೆವು. ಆದರೆ, ಪಾಕಿಸ್ತಾನವು 2011 ಹೊರತುಪಡಿಸಿದರೆ ಉಳಿದ ಆವೃತ್ತಿಗಳಲ್ಲಿ ಲೀಗ್​ ಹಂತದಲ್ಲೇ ನಿರ್ಗಮಿಸಿದೆ.

    ಇದನ್ನೂ ಓದಿ: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್​ ಅಧಿಕಾರಿ; ಆರೋಪಿ ಅರೆಸ್ಟ್

    ಪ್ರತಿಬಾರಿಯೂ ಭಾರತದ ಮೇಲೆ ಸೋತಾಗ ನೀವು ಬಿಸಿಸಿಐ ಹಾಗೂ ಐಸಿಸಿಯನ್ನು ದೂಷಿಸುವ ಹಾಸ್ಯಾಸ್ಪದ ಆರೋಪಗಳನ್ನು ಮಾಡಿ ಟೀಕೆಗೆ ಗುರಿಯಾಗಿದ್ದೀರಾ. ನಾವು ಬೇರೆ ತಂಡದ ಮೇಲೆ ಸೋತಾಗ ನಿಮ್ಮ ಪ್ರಧಾನಿಗಳು ನಮ್ಮನ್ನು ಟೀಕಿಸಿ ಟ್ವೀಟ್​ ಮಾಡಿದ್ದಾರೆ. ನಿಮ್ಮ ತಂಡದ ಆಟಗಾರರು ನಮ್ಮ ದೇಶದ ಸೈನಿಕರನ್ನು ಅಪಹಾಸ್ಯ ಮಾಡುತ್ತಿರುವ ಪೋಸ್ಟ್​ಗಳನ್ನು ಹಾಕಿದ್ದಾರೆ.

    ಭಾರತವನ್ನು ಶತ್ರು ರಾಷ್ಟ್ರ ಎಂದು ಕರೆಯುವ ಪಿಸಿಬಿ ಮುಖ್ಯಸ್ಥರು ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದ್ದು, ಮೈದಾನದ ಹೊರಗಾಗಲಿ ಅಥವಾ ಒಳಗಾಗಲಿ ನಮ್ಮೊಂದಿಗೆ ಚೆನ್ನಾಗಿ ವರ್ತಿಸುವವರಿಗೆ ನಾವು ತುಂಬಾ ಒಳ್ಳೆಯವರು ಮತ್ತು ಯಾರಾದರೂ ಈ ರೀತಿ ವರ್ತಿಸಿದರೆ, ಅವರಿಗೆ ತಕ್ಕ ತಿರುಗೇಟು ಕೊಡುತ್ತೇವೆ ಎಂದು ಸೆಹ್ವಾಗ್​ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇತ್ತೀಚಿಗೆ ಪಾಕಿಸ್ತಾನ ಜಿಂದಾಭಾಗ್ ಎಂದು ಪೋಸ್ಟ್​ ಮಾಡಿ ಟೀಕಿಸಿದ್ದ ಸೆಹ್ಬಾಗ್ ಇದೀಗ ಮತ್ತೊಮ್ಮೆ ತಮ್ಮ ಪ್ರಹಾರವನ್ನು ಮುಂದುವರೆಸಿದ್ದಾರೆ. ಕಳೆದ ವರ್ಷ ನಡೆದ ಟಿ-20 ವಿಶ್ವಕಪ್​ ವೇಳೆ ಇಂಗ್ಲೆಂಡ್​ ವಿರುದ್ಧ ಸೆಮೀಸ್​ನಲ್ಲಿ ಮುಗ್ಗರಿಸಿದ ಭಾರತದ ವಿರುದ್ಧ ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿತ್ತು. ಇಂದು (ನವೆಂಬರ್​ 11) ಅದೇ ಪಾಕಿಸ್ತಾನ ತಂಡವು ತನ್ನ ಸೆಮೀಸ್​ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿರುವುದು ಸೋಚನೀಯ ಎಂದು ಮಾರ್ಮಿಕವಾಗಿ ಟ್ವೀಟ್​ ಮೂಲಕ ನೆರೆಯ ದೇಶವನ್ನು ಕಾಲೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts