ಬೊಮ್ಮಾಯಿಗೆ ವರಿಷ್ಠರ ಬುಲಾವ್; ದೆಹಲಿಗೆ ದೌಡು

CM Basavaraja Bommai
Published on

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಿಷ್ಠರನ್ನು ಭೇಟಿಯಾಗುವ ಮಹೂರ್ತ ಕೊನೆಗೂ ನಿಗದಿಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದೊಳಗೆ ಕುತೂಹಲ, ಉತ್ಸಾಹ ಗರಿಗೆದರಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸೋಮವಾರ ಬೆಳಗ್ಗೆ ಭೇಟಿಯಾಗಿ ಮಾತುಕತೆ ನಡೆಸಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವೆ. ಆಪ್ತ ಮೂಲಗಳ ಪ್ರಕಾರ ವರಿಷ್ಠರ ಬುಲಾವ್ ಮೇರೆಗೆ ಬೊಮ್ಮಾಯಿ ದೆಹಲಿಗೆ ದೌಡಾಯಿಸಿದ್ದಾರೆ.

ವಿಧಾನ ಮಂಡಲ ಪ್ರತಿಪಕ್ಷ ನಾಯಕರು ಹಾಗೂ ಪಕ್ಷದ ರಾಜ್ಯ ಸಮಿತಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ವರಿಷ್ಠರ ತಳೆದ ವಿಳಂಬ ನಿಲುವು ರಾಜ್ಯ ನಾಯಕರನ್ನು ಪೇಚಿಗೆ ಸಿಲುಕಿಸಿದೆ. ಕೆಲವು ನಾಯಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದ್ದು ಬಿಟ್ಟರೆ ಮತ್ತೇನೂ ಬೆಳವಣಿಗೆಯಾಗಿದ್ದಿಲ್ಲ.

ಗುಂಪುಗಾರಿಕೆ, ಹುದ್ದೆಗೆ ಲಾಬಿ, ಗೊಂದಲಗಳ ಕಾರಣದಿಂದ ದೆಹಲಿ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಇದೀಗ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಪಕ್ಷದ ರಾಜ್ಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಆಸೆ ಚಿಗುರಿದೆ. ಸಂಘಟನೆಗೆ ಬಲ ತುಂಬಲು ಕೊನೆಗೂ ವರಿಷ್ಠರು ಮನಸ್ಸು ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತರ್ಕಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net