ಸ್ಟ್ರಾಂಗ್ ರೂಂನಲ್ಲಿ ಇವಿಎಂ ಭದ್ರ, ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್

strongroom
ಸ್ಟ್ರಾಂಗ್‌ ರೂಂಗೆ ಅಧಿಕಾರಿಗಳು ಸೀಲ್‌ ಹಾಕಿರುವುದು.
Published on

ಕೋಲಾರ:ಲೋಕಸಭಾ ಚುನಾವಣೆ ಮತದಾನವು ಶಾಂತಿಯುತವಾಗಿ ನಡೆದಿದ್ದು, ಮತಯಂತ್ರಗಳನ್ನು (ಇವಿಎಂ) ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಭದ್ರತಾ ಕೊಠಡಿಯಲ್ಲಿ ಇರಿಸಿ ಚುನಾವಣಾ ವೀಕ್ಷಕರು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮ್ಮುಖದಲ್ಲಿ ರೂಂಗಳನ್ನು ಶನಿವಾರ ಸೀಲ್ ಮಾಡಲಾಯಿತು.

ಜೂ.4ರಂದು ಮತ ಎಣಿಕೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ಟಾಂಗ್ ರೂಂಗಳಿರುವ ಕಾಲೇಜಿನ ಸುತ್ತಲೂ 3 ಸುತ್ತು ಬಿಗಿಭದ್ರತೆ ಹಾಗೂ ಸೆಂಟ್ರಲ್ ಫೋರ್ಸ್ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಚುನಾವಣಾಽಕಾರಿ ಹಾಗೂ ಜಿಲ್ಲಾಽಕಾರಿ ಅಕ್ರಂಪಾಷಾ, ಯಾವುದೇ ರೀತಿ ಗೊಂದಲಗಳಿಲ್ಲದೆ ಲೋಕಸಭೆ ಚುನಾವಣಾ ಮತದಾನ ನಡೆದಿದೆ. ಕಳೆದ ಬಾರಿಗಿಂತ ಈ ಬಾರಿ ಮತದಾನದ ಪ್ರಮಾಣವು ಹೆಚ್ಚಾಗಿದೆ ಎಂದು ಹೇಳಿದರು. ಸ್ವೀಪ್ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಮತದಾನ ಹೆಚ್ಚಾಗಿದ್ದು, ಉತ್ತಮವಾಗಿ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ 2060 ಮತದಾನ ಕೇಂದ್ರಗಳಿAದ ಇವಿಎಂಗಳು ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದು, ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಚುನಾವಣಾ ವೀಕ್ಷಕರು, ಎಸ್ಪಿಗಳ ಸಮ್ಮುಖದಲ್ಲಿ ಜೋಡಿಸಿ ಸುರಕ್ಷಿತವಾಗಿ ಇಡಲಾಗಿದೆ ಎಂದರು.

ಸ್ಟ್ರಾಂಗ್ ರೂಂ ಬಳಿಗೆ ಬಂದ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಪೊಲೀಸ್ ಭದ್ರತೆಯೊಂದಿಗೆ ತರಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೧೬ ಸ್ಟಾಂಗ್ ರೂಂಗಳಿದ್ದು, ೬೧ ಸಿಸಿಟಿವಿ ಕ್ಯಾಮರಾಗಳು ಜತೆಗೆ ಇನ್ನೂ ೮ ಕ್ಯಾಮರಾಗಳನ್ನು ಕಟ್ಟಡದ ಸುತ್ತಲೂ ಅಳವಡಿಸಲಾಗಿದೆ ಎಂದು ತಿಳಿಸಿದರು.

ಭದ್ರತೆಗಾಗಿ ಈಗಾಗಲೇ ಸೆಂಟ್ರಲ್ ಫೋರ್ಸ್ ಸಿಬ್ಬಂದಿ ಆಗಮಿಸಿದ್ದು, ೩ ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. ಮೊದಲ ಹಂತದಲ್ಲಿ ಸೆಂಟ್ರಲ್ ಪೋರ್ಸ್, ಎರಡನೇ ಹಂತದಲ್ಲಿ ಸ್ಥಳೀಯ ಪೊಲೀಸ್ ಹಾಗೂ ಮೂರನೇ ಹಂತದಲ್ಲಿ ಹೊರಗಿನಿಂದ ಆಗಮಿಸಿರುವ ಪೊಲೀಸರು ರಕ್ಷಣೆ ಮಾಡಲಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಕೋಲಾರ, ಕೆಜಿಎ-ï ಎಸ್ಪಿಗಳು ವಹಿಸಿಕೊಂಡಿದ್ದಾರೆ. ೩ ಪಾಳಯದಲ್ಲಿ ತುಕಡಿಗಳು ರಕ್ಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

  • ಜೂ.4ಕ್ಕೆ ಮತ ಏಣಿಕೆ
    ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಲಾಗುವುದು. ಚುನಾವಣೆ ವೀಕ್ಷಕರ ನೇತೃತ್ವದಲ್ಲಿ ೧೬ ಕೊಠಡಿಗಳನ್ನು ಸೀಲ್ ಮಾಡಿದ್ದು, ಮತ ಎಣಿಕೆಯ ಜೂ.೪ರಂದು ತೆರೆಯಲಾಗುತ್ತದೆ. ಚುನಾವಣೆ ಮುಖ್ಯ ವೀಕ್ಷಕರು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ 7 ಗಂಟೆಗೆ ತೆರೆದು, 8ಕ್ಕೆ ಮತ ಎಣಿಕೆ ಆರಂಭಿಸಲಾಗುವುದು ಎಂದರು. ಏಣಿಕೆಗೆ ಬೇಕಾದ ಸಕಲಸಿದ್ಧತೆಗಳು ನಡೆಯಲಿವೆ. ರಾಜಕೀಯ ಪಕ್ಷಗಳವರು ಯಾವಾಗ ಬೇಕಿದ್ದರೂ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಸಿಸಿಟಿವಿ ಹಾಗೂ ಖುದ್ದಾಗಿ ವೀಕ್ಷಣೆ ನಡೆಸಬಹುದಾಗಿದೆ ತಿಳಿಸಿದರು.
  • ಮರು ಮತದಾನದ ಅವಶ್ಯಕತೆಯಿಲ್ಲ
    ಕೆಬಿ ಹೊಸಹಳ್ಳಿ, ಬೆಗ್ಲಿ ಬೆಣಜೇನಹಳ್ಳಿ ಹಾಗೂ ಮುಷ್ಟೂರಿನಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದ್ದು, ನಮ್ಮ ಸಿಬ್ಬಂದಿ ತೆರಳಿ ಮನವೊಲಿಸಿ ಮತದಾನ ಮಾಡಿಸಿದ್ದಾರೆ. ಆದರೆ, ಮರು ಮತದಾನಕ್ಕೆ ಅನುಗುಣವಾಗುವ ಯಾವುದೇ ಘಟನೆ ನಡೆದಿಲ್ಲ. ಮರು ಮತದಾನ ಎಲ್ಲಿಯೂ ಆಗುವ ಸಾಧ್ಯತೆಯಿಲ್ಲ. ಮತದಾನ ಕಡಿಮೆಯಾಗಿರುವ ಬೂತ್‌ಗಳ ಬಗ್ಗೆ ವೀಕ್ಷಕರು ಮತಗಟ್ಟೆ ಮಾಹಿತಿ ಪಡೆದು, ಮುಂದಿನ ನಿರ್ಧಾರ ಮಾಡುತ್ತಾರೆ ಎಂದರು. ಮತದಾನದ ವೇಳೆ ಸಮಸ್ಯೆಯಾಗಿದ್ದ 6 ಬ್ಯಾಲೆಟ್ ಯೂನಿಟ್, 3 ಕಂಟ್ರೋಲ್ ಯೂನಿಟ್ ಹಾಗೂ 41 ವಿವಿ ಪ್ಯಾಟ್‌ಗಳನ್ನು ಬದಲಾಯಿಸಲಾಗಿದ್ದು, ಚುನಾವಣಾ ಆಯೋಗ, ರಾಜಕೀಯ ಪಕ್ಷಗಳ ಏಜೆಂಟರ್‌ಗಳಿಗೆ ಮಾಹಿತಿ ನೀಡಲಾಗಿದೆ. ಇವಿಎಂಗಳ ತಾಂತ್ರಿಕ ದೋಷ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ತೀರಾ ಕಡಿಮೆಯಾಗಿದ್ದು, ಬಿಸಿಲಿನಿಂದಾಗಿ ಕಾರ್ಯನಿರ್ವಹಿಸಿರಲಿಲ್ಲ ಎಂದು ಜಿಲ್ಲಾಽಕಾರಿ ತಿಳಿಸಿದರು.
  • ಮತದಾನದಲ್ಲಿ ಕೋಲಾರ 2ನೇ ಸ್ಥಾನ
    ಮಂಡ್ಯ ಜಿಲ್ಲೆಯಲ್ಲಿ ಶೇ.81ರಷ್ಟು ಮತದಾನ ನಡೆದಿದ್ದು, ಅದನ್ನು ಹೊರತುಪಡಿಸಿದರೆ ಕೋಲಾರವು 78.26ರ ಮೂಲಕ ಮತದಾನದಲ್ಲಿ ೨ನೇ ಸ್ಥಾನ ಪಡೆದಿದೆ. ಮತದಾರರ ಪಟ್ಟಿ ಉತ್ತಮವಾಗಿ ತಯಾರಿಸಿರುವುದೇ ಹೆಚ್ಚಿನ ಮತದಾನಕ್ಕೆ ಕಾರಣವಾಗಿದೆ. ಹಿಂದಿಗಿಂತಲೂ ಹೆಚ್ಚಿನ ಮತದಾನ ಮಾಡಿರುವುದು ಹೆಮ್ಮೆಯ ಸಂಗತಿ. ಒಟ್ಟಾರೆ ವ್ಯವಸ್ಥಿತ, ಸುಸಜ್ಜಿತವಾಗಿ ಚುನಾವಣೆ ಮುಗಿದಿದೆ. ಚುನಾವಣÉ ವೀಕ್ಷಕರು, ಜಿಪಂ ಸಿಇಒ, ಕೋಲಾರ, ಕೆಜಿಎಫ್ ಎಸ್ಪಿಗಳು, ಕಂದಾಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲೆಯ 10 ಸಾವಿರ ಸಿಬ್ಬಂದಿ, 7 ಸಾವಿರ ಪೊಲೀಸ್ ಸೇರಿದಂತೆ ಸುಮಾರು 20 ಸಾವಿರ ಮಂದಿ ಯಶಸ್ಸಿನಲ್ಲಿ ಭಾಗಿಯಾಗಿದ್ದು, ಯಶಸ್ಸಿನ ಕೀರ್ತಿ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದು ಸಂತಸವ್ಯಕ್ತಪಡಿಸಿದರು.
  • ಟೈಯರ್ ಬ್ಲಾಸ್ಟ್ ಅಲ್ಲ, ಪಂಕ್ಚರ್
    ಮುಳಬಾಗಿಲು ತಾಲೂಕಿನ ಇವಿಎಂಗಳನ್ನು ತರುತ್ತಿದ್ದ ವಾಹನದ ಟೈರ್ ಬ್ಲಾಸ್ಟ್ ಆಗಿರಲಿಲ್ಲ. ಪಂಕ್ಚರ್ ಆಗಿದ್ದು, ಟೈಯರ್ ಬದಲಿಸಿಕೊಂಡು ಅದೇ ವಾಹನದಲ್ಲಿ 40 ನಿಮಿಷ ತಡವಾಗಿ, ತರಲಾಗಿದೆ ಯಾವುದೇ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಎಸ್ಪಿಗಳಾದ ಎಂ.ನಾರಾಯಣ, ಕೆ.ಎಂ.ಶಾಂತರಾಜು, ಎಡಿಸಿ ಶಂಕರ್ ವಣಿಕ್ಯಾಳ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net