

ಬೆಂಗಳೂರು: ಮಹಾರಾಷ್ಟ್ರದ ಬಹಳಷ್ಟು ಕಡೆ ಬಿಜೆಪಿಯವರು ಇವಿಎಂ ಮ್ಯಾನುಪ್ಯುಲೇಟ್(EVM hack in Maharashtra) ಮಾಡಿರುವ ಕುರಿತು ಚರ್ಚೆಯಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameswar)ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯರಿಗೆ ಯಾವ ಸಂದರ್ಭದಲ್ಲಿ, ಯಾವ ರಾಜ್ಯದಲ್ಲಿ ಮತ್ತು ಯಾವ ಕ್ಷೇತ್ರದಲ್ಲಿ ಇವಿಎಂ ಹ್ಯಾಕ್ ಮಾಡಬೇಕು ಎನ್ನುವುದನ್ನು ಪ್ಲಾನ್ ಆ್ ಆ್ಯಕ್ಷನ್ ತರ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲ್ಲ ಎಂದರೆ ಕೆಲವು ಕಡೆ ಬಿಟ್ಟು ಬಿಡುತ್ತಾರೆ. ಗೆದ್ದೇ ಗೆಲ್ಲುತ್ತೇವೆ ಎನ್ನುವ ಕ್ಷೇತ್ರಗಳನ್ನು ಬಿಟ್ಟು, ಬೇರೆ ಕ್ಷೇತ್ರಗಳಲ್ಲಿ ಮಾಡುತ್ತಾರೆ ಎಂದರು.
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದೊಡ್ಡ ಸೋಲಾಯಿತು. ಕಾರಣ ಬಹಳಷ್ಟು ಕಡೆ ಇವಿಎಂ ಯಂತ್ರಗಳನ್ನು ತಿರುಚಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಎಲ್ಲಿವರೆಗೆ ಇವಿಎಂ ಇರುತ್ತದೆಯೋ ಅಲ್ಲಿಯವರೆಗೆ ಕಾಂಗ್ರೆಸ್ ಆಗಲಿ ಬೇರೆ ಪಕ್ಷವಾಗಲಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಮಾತು ಚರ್ಚೆಯಲ್ಲಿದೆ. ಇವಿಎಂಗಳನ್ನು ಯಾವ ರೀತಿ ಹ್ಯಾಕ್ ಮಾಡುವುದನ್ನು , ತಿರುಚುವುದನ್ನು ಬಿಜೆಪಿಯವರು ಕರಗತ ಮಾಡಿಕೊಂಡಿದ್ದಾರೆ. ಎಲ್ಲಿ ಬೇಕು ಅಲ್ಲಿ ಮಾಡುತ್ತಾರೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ಬಿಟ್ಟರು. ಒಂದು ರಾಜ್ಯ ಬಿಟ್ಟು ಬಿಡುತ್ತಾರೆ. ಆಗ ಇವಿಎಂ ಹ್ಯಾಕ್ ಮಾಡುವುದಿಲ್ಲ ಎಂಬ ನಂಬಿಕೆ ಬರುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ತಾಂತ್ರಿಕವಾಗಿ ಇವಿಎಂ ಹ್ಯಾಕ್ ಮಾಡಬಹುದಾಗಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಬರುತ್ತದೆ ಎಂದುಕೊಂಡು ಅಲ್ಲೂ ಹ್ಯಾಕ್ ಮಾಡಿಲ್ಲ ಎಂದರು.
ಹದಿನೈದು ವರ್ಷದಿಂದ ನಾವು ಇವಿಎಂ ಬೇಡ ಎನ್ನುತ್ತಿದ್ದೇವೆ. ಅಮೆರಿಕ, ಯೂರ್ೋ ಸೇರಿದಂತೆ ಬೇರೆ ದೇಶಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ಚಿದಂಬರಂ, ಕಪಿಲ್ ಸಿಬಲ್, ಜೈರಾಂ ರಮೇಶ್ ನೇತೃತ್ವದಲ್ಲಿ ಚುನಾವಣೆ ಆಯೋಗದ ಮುಂದೆ ಮನವಿ ಮಾಡಿದ್ದೆವು. ಬ್ಯಾಲೆಟ್ ಪೇಪರ್ ಮಾಡಲು ತೊಂದರೆ ಏನಾಗಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಲ್ಲದೇ ಬೇರೆ ಪಾರ್ಟಿಯವರು ಕೋರ್ಟ್‌ಗೆ ಹೋಗಿದ್ದರು. ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ನಾವು ಎಲ್ಲಿಗೆ ಹೋಗಬೇಕು? ಯಾರನ್ನು ಕೇಳಬೇಕು ಎಂದು ಜನ ಕೇಳುತ್ತಾರೆ ಎಂದು ಹೇಳಿದರು.
ತಾಂತ್ರಿಕವಾಗಿ ಹ್ಯಾಕ್ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಲಾಗಿದೆ. ಜರ್ಮನ್ ತಜ್ಞರು ಬಂದಾಗ, ಯಂತ್ರದಲ್ಲಿ ಏನು ಆಗುತ್ತದೆ ಎಂದು ನಾವು ಯಾರು ನೋಡೋದಿಕ್ಕೆ ಆಗುವುದಿಲ್ಲ. ಯಂತ್ರದ ಮೇಲೆ ನಂಬಿಕೆ ಯಾಕೆ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ. ಹಾಗಾಗಿ ನಮಗೆ ಅನುಮಾನ ಬರುವುದು ಸಹಜ ಎಂದರು.
ಎಂಪಿಸಿಸಿ ಅಧ್ಯಕ್ಷ ನಾನ ಪಟೋಲೆ 136 ಮತಗಳಲ್ಲಿ ಸೋತರು ಎನ್ನಲಾಯಿತು. ಮರು ಮತ ಎಣಿಕೆ ಮಾಡಿದಾಗ ಗೆದ್ದರು. ಆ ರೀತಿ ಹೇಗಾಯಿತು ಎಂದು ಡಾ.ಪರಮೇಶ್ವರ ಕೇಳಿದರು.