ಸರ್ಕಾರದಲ್ಲಿ ಎಲ್ಲ ಸರಿ ಇದೆ ಅಂತ ಹೇಳಲ್ಲ; ಸಚಿವ ಸತೀಶ್ ಜಾರಕಿಹೊಳಿ

Satish Jarakiholi
Published on

ಬೆಂಗಳೂರು: ಸರ್ಕಾರದಲ್ಲಿ ಎಲ್ಲ ಸರಿ ಇದೆ ಅಂತ ಹೇಳಲ್ಲ. ಹಲವು ವಿಚಾರವಾಗಿ ಅಸಮಾಧಾನ ಇದ್ದೆ ಇರುತ್ತದೆ. ಸಮಾನ ಮನಸ್ಕರು ಸೇರುವುದು ಇದ್ದೆ ಇರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವರೆಗೂ ಶಾಸಕರು ಚುನಾವಣೆಯಲ್ಲಿ ಬ್ಯುಸಿಯಲ್ಲಿ ಇದ್ದರು. ಅವರು ಬಿಡುವು ತೆಗೆದುಕೊಂಡ ನಂತರ ಪ್ರವಾಸದ ವಿಚಾರ ಮಾಡೋಣ. ಇನ್ನೂ ಯಾವ ಶಾಸಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕರ ಅಸಮಾಧಾನ ಇದ್ದೆ ಇರುತ್ತದೆ. ಆಡಳಿತ ಪಕ್ಷ ಅಂದಾಗ ಅಸಮಾಧಾನ ಸಹಜ ಎಂದ ಅವರು ಬಿಜೆಪಿಯವರು ರಾಜಕೀಯ ಕಾರಣಕ್ಕೆ ಸರ್ಕಾರ ಬೀಳುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಬೀಳಲ್ಲ, ಸುಮ್ಮನೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹಾಗಾಗಿಯೇ ವಿಜಯೇಂದ್ರ ನಾವು ಹೊಣೆಯಲ್ಲ ಎಂದೂ ಹೇಳುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಯ ಮೊದಲನೆ ಹಂತದಲ್ಲಿ ಮೋದಿ ಅಲೆ ಇತ್ತು. ಎರಡನೇ ಹಂತದಲ್ಲಿ ಮೋದಿ ಅಲೆ ಕಾಣಿಸಲಿಲ್ಲ. ಈ ಹಿಂದೆ ಇದ್ದ ಮೋದಿ ಅಲೆ ಈ ಚುನಾವಣೆಯಲ್ಲಿ ಇಲ್ಲ ರಾಜ್ಯದಲ್ಲಿ ಗ್ಯಾರಂಟಿಗಳ ಫಲಾನುಭವಿಗಳು ಉತ್ತರ ಕರ್ನಾಟಕದಲ್ಲಿ ಹೆಚ್ಚು ಇತ್ತು. ಪೆನ್‌ಡ್ರೈವ್ ಪ್ರಕರಣ ನಮಗೆ ಅನುಕೂಲ ಅಂತ ಇಲ್ಲ. ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಿದ್ದೇವೆ ಎಂದರು.
ಸಂತ್ರಸ್ತ ಮಹಿಳೆ ದೂರು ಕೊಟ್ಟಿದ್ದಾರೆ. ಹಾಗಾಗಿಯೇ ರೇವಣ್ಣರನ್ನ ಬಂಧಿಸಲಾಗಿತ್ತು. ಇದರ ಹೊರತಾಗಿ ಇಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net