

ನರಿಗಳು ಯಾರಿಗೆ ಗೊತ್ತಿಲ್ಲ? ನರಿ ಎಂದರೆ ಕುತಂತ್ರ ಎಂಬುದೇ ಮನಸಿಗೆ ಬರುತ್ತದೆ. ಅನಾದಿ ಕಾಲದಿಂದಲೂ ನರಿಗಳನ್ನು ಕೆಟ್ಟ ಪ್ರಾಣಿಗಳೆಂದೇ ಬಿಂಬಿಸಲಾಗುತ್ತಿದೆ. ಅಲ್ಲೆಲ್ಲೋ ನರಿ ಊಳಿಟ್ಟರೆ ಅದು ಅಪಶಕುನ ಎಂದೂ ಹೇಳುವವರೂ ಇದ್ದಾರೆ.
ಆದರೆ ಇಂಥ ನರಿಗೂ ಸಖತ್ ಕ್ಯೂಟ್ ಆಗಿ ನಗಬಲ್ಲವು ಗೊತ್ತಾ? ನಂಬಿಕೆ ಬಾರದಿದ್ದರೆ ಕೆಳಗೆ ಇರುವ ವಿಡಿಯೋ ನೋಡಿ.
ಮಾಲಿಫ್ಪ್ರಿನ್ಸ್ ಎಂಬ ಟ್ವಿಟರ್ ಬಳಕೆದಾರರು ನರಿಗಳು ನಗುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದೊಂದು ಹಳೇ ವಿಡಿಯೋ ಆಗಿದ್ದು, ಮತ್ತೊಮ್ಮೆ ವೈರಲ್ ಆಗಿದೆ.
ಮೂರ್ನಾಲ್ಕು ನರಿಗಳು ನಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರಲ್ಲೂ ಮನುಷ್ಯನೋರ್ವನ ಕೈಯಿ ಆ ಪ್ರಾಣಿಗಳ ಮೇಲೆ ಹರಿದಾಡುತ್ತಿದ್ದಂತೆ, ಅವು ಕಚಗುಳಿಯಾದಂತೆ, ಮುದ್ದಾಗಿ ನಗುತ್ತವೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದೆ. (ಏಜೆನ್ಸೀಸ್)