

ಪಣಜಿ: ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸವನ್ನೇ ಕೊಡಲು ದೇವರಿಂದಲೂ ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಹಳ್ಳಿಗಳನ್ನು ಸ್ವಾವಲಂಬಿ ಮಾಡುವುದು ಹಾಗೂ ಮಾನವ ಅಭಿವೃದ್ಧಿಗಾಗಿ ಗೋವಾ ಸರ್ಕಾರ ರೂಪಿಸಿದ ಮಹಾತ್ವಾಕಾಂಕ್ಷಿ ಯೋಜನೆ 'ಸ್ವಯಂಪೂರ್ಣಾ ಮಿತ್ರ' ವನ್ನು ಉದ್ಘಾಟಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಬಳಿಕ ಪಂಚಾಯತ್ ಮಟ್ಟದ ಪ್ರತಿನಿಧಿಗಳೊಂದಿಗೆ ಇಂದು ವೆಬ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಸಿಎಂ, ದೇವರೇ ಬಂದು ಮುಖ್ಯಮಂತ್ರಿಯಾದರೂ ಎಲ್ಲರಿಗೂ ಸರ್ಕಾರಿ ಕೆಲಸ ಕೊಡಲು ಸಾಧ್ಯವಿಲ್ಲ ಎಂದರು.
ಗೋವಾದಲ್ಲಿಯೇ ಹಲವು ಉದ್ಯೋಗಗಳಿವೆ. ಈ ನಮ್ಮ ಸ್ವಯಂಪೂರ್ಣಾ ಮಿತ್ರ ಯೋಜನೆ ಗ್ರಾಮೀಣ ಮಟ್ಟದ ಉದ್ಯೋಗಗಳನ್ನು ಉತ್ತೇಜಿಸುತ್ತದೆ. ಈ ಯೋಜನೆಯಡಿ ಸರ್ಕಾರಿ ಗೆಜೆಟ್ ಅಧಿಕಾರಿಗಳು ಪ್ರತಿ ಪಂಚಾಯತ್ಗಳಿಗೂ ಭೇಟಿ ನೀಡುತ್ತಾರೆ. ಹಾಗೇ ಸರ್ಕಾರಿ ಯೋಜನೆಗಳ ತಳಮಟ್ಟದ ಅನುಷ್ಠಾನದ ಅಡಿಟ್ ಮಾಡುತ್ತಾರೆ ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ.15.4ರಷ್ಟಿದೆ. ಎಲ್ಲರಿಗೂ ಉದ್ಯೋಗ ನೀಡಲು ಎಲ್ಲರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. (ಏಜೆನ್ಸೀಸ್)