ಯಶಸ್ವಿಯಾಗಿ ಆರಂಭವಾದ ಮೌಲ್ಯಂಕನ: ಮಂಡಳಿ ಪರೀಕ್ಷೆ ಬಗ್ಗೆ ಇಲ್ಲಿದೆ ನೋಡಿ ವಿದ್ಯಾರ್ಥಿಗಳ ಅನಿಸಿಕೆ

SSLC Exam
Published on

ಬೆಂಗಳೂರು ರಾಜ್ಯಾದ್ಯಂತ ಸೋಮವಾರ ನಡೆದ 5,8 ಮತ್ತು 9ನೇ ತರಗತಿ ಮೌಲ್ಯಂಕನವು ಯಶಸ್ವಿಯಾಗಿ ಜರುಗಿದೆ.

ಒಟ್ಟು 28.14 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶಾಲಾ ಹಂತದಲ್ಲಿ ಪರೀಕ್ಷೆ ನಡೆದಿರುವ ಕಾರಣ, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ದತ್ತಾಂಶದ ಮಾಹಿತಿ ಬರುವುದು ತಡವಾಗಿದೆ. ಆದ್ದರಿಂದ ನಿಖರ ಮಾಹಿತಿ ಲಭ್ಯವಾಗಿಲ್ಲ. ಮೊದಲ ದಿನ ಕನ್ನಡ ಪರೀಕ್ಷೆ ನಡೆದಿದ್ದು, ಮಂಗಳವಾರ ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಮಂಡಳಿ ಪರೀಕ್ಷೆ ಎಂದಾಕ್ಷಣ ತುಂಬಾ ಭಯವಾಗಿತ್ತು. ಆದ್ದರಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ಶಿಕ್ಷಕರು ಮತ್ತು ಮನೆಯಲ್ಲಿಯೂ ಚೆನ್ನಾಗಿ ಮಾರ್ಗದರ್ಶನ ಮಾಡಿದ್ದರು. ಪ್ರಶ್ನೆಪತ್ರಿಕೆ ನೋಡಿದ ನಂತರ ಖುಷಿ ಆಯ್ತು. ಪರೀಕ್ಷೆಯನ್ನು ಚೆನ್ನಾಗಿ ಮಾಡಿದ್ದೇವೆ. ಉತ್ತಮ ಅಂಕ ಬರಲಿವೆ ಎಂದು ಹಲವು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net