ಯುರೋಪಿಯನ್​ ದೇಶಗಳು ರಷ್ಯಾದಿಂದ ನೈಸರ್ಗಿಕ ಅನಿಲ ಖರೀದಿಸುವುದನ್ನು ಬೀಡಬೇಕು: ಮಾರ್ಕೊ ರೂಬಿಯೊ| Marco Rubio

Marco Rubio
Published on

Marco Rubio: ರಷ್ಯಾದಿಂದ ಖರೀದಿಸಿದ ತೈಲವನ್ನು ಚೀನಾ ಸಂಸ್ಕರಿಸುತ್ತಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ಈ ಬಗ್ಗೆ ಫಾಕ್ಸ್ ಬಿಸಿನೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಬಿಯೊ, ನೀವು ಚೀನಾ ಖರೀದಿಸುತ್ತಿರುವ ಮತ್ತು ಸಂಸ್ಕರಿಸಲ್ಪಡುವ ತೈಲವನ್ನು ನೋಡಿದರೆ, ಅದರಲ್ಲಿ ಹೆಚ್ಚಿನದನ್ನು ಯುರೋಪಿಗೆ ಮಾರಾಟ ಮಾಡಲಾಗುತ್ತಿದೆ. ಯುರೋಪ್, ರಷ್ಯಾದಿಂದ ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ. ಈಗ, ಯುರೋಪಿನ್ ದೇಶಗಳು ಅದರಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ. ಆದರೆ, ಯುರೋಪ್ ತಮ್ಮದೇ ಆದ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನದನ್ನು ಮಾಡಬಹುದು ಎಂದು ತಿಳಿಸಿದ್ದಾರೆ.

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವುದನ್ನು ಮುಂದುವರಿಸಿದ್ದಕ್ಕಾಗಿ ಯುರೋಪ್ ವಿರುದ್ಧ ನಿರ್ಬಂಧಗಳನ್ನು ವಿಧಿಸುವ ಚಿಂತನೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, ರೂಬಿಯೊ, ಸರಿ, ನನಗೆ ನಿರ್ಬಂಧಗಳ ಬಗ್ಗೆ ನೇರವಾಗಿ ತಿಳಿದಿಲ್ಲ. ಸ್ಪಷ್ಟವಾಗಿ ಹೇಳುವುದಾದರೇ ದ್ವಿತೀಯ ನಿರ್ಬಂಧಗಳಿಗೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ನೀವು ಒಂದು ದೇಶದ ಮೇಲೆ ದ್ವಿತೀಯ ನಿರ್ಬಂಧಗಳನ್ನು ಹೇರಿದರೆ, ನೀವು ರಷ್ಯಾದ ತೈಲವನ್ನು ಚೀನಾ ತೈಲ ಮಾರಾಟ ಮಾಡುವುದನ್ನು ಮುಂದುವರಿಸುತ್ತೀರಿ ಎಂದು ಹೇಳೋಣ ಸರಿ, ಚೀನಾ ಆ ತೈಲವನ್ನು ಸಂಸ್ಕರಿಸುತ್ತದೆ. ಆ ತೈಲವನ್ನು ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ, ಮತ್ತು ಆ ತೈಲವನ್ನು ಖರೀದಿಸುವ ಯಾರಾದರೂ ಅದಕ್ಕೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.ಆದರೆ, ಇದಕ್ಕೆ ಪರ್ಯಾಯ ಮೂಲವನ್ನು ಕಂಡುಹಿಡಿಯಬೇಕಾಗುತ್ತದೆ ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ರೂಬಿಯೊ, ಚೀನಾ ಮತ್ತು ಭಾರತದ ಮೇಲೆ 100% ಸುಂಕ ವಿಧಿಸಲಾಗಿದ್ದ ಸೆನೆಟ್ ಮಸೂದೆಯ ಬಗ್ಗೆ ನೀವು ಮಾತನಾಡುವಾಗ, ಪತ್ರಿಕಾ ಪ್ರಕಟಣೆಗಳಲ್ಲಿ ಅಲ್ಲ, ಹಲವಾರು ಯುರೋಪಿಯನ್ ದೇಶಗಳಿಂದ ನಾವು ಕೇಳಿದ್ದೇವೆ. ಆದರೆ, ಇದರಿಂದ ಏನಾಗಬಹುದು ಎಂಬುದರ ಕುರಿತು ಕಳವಳ ವ್ಯಕ್ತಪಡಿಸಿದ್ದೇವೆ ಎಂದು ಹೇಳಿದರು.

ಈ ವಿಷಯದಲ್ಲಿ ಯುರೋಪಿಯನ್ನರೊಂದಿಗೆ ಜಗಳವಾಡಲು ತಾನು ಬಯಸುವುದಿಲ್ಲ ಎಂದು ರೂಬಿಯೊ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net