FACT CHECK| ಭಾರತೀಯ ಮತದಾರರು ಮೂರ್ಖರು ಎಂದು ಯುರೋಪಿಯನ್ ಕಮಿಷನ್ ಮಾಜಿ ಅಧ್ಯಕ್ಷರು ಹೇಳಿದ್ರಾ?

ec jan 03 2020
Published on

ನವದೆಹಲಿ: ಯುರೋಪಿಯನ್ ಕಮಿಷನ್​ (ಇಸಿ) ಮಾಜಿ ಅಧ್ಯಕ್ಷ ಜೀನ್​ ಕ್ಲೌಡ್​ ಜಂಕರ್​ ಅವರು ಭಾರತೀಯ ಮತದಾರರನ್ನು ಮೂರ್ಖರು ಎಂದು ಹೇಳಿದ್ದಾರೆ ಎನ್ನುವ ಪೋಸ್ಟ್​ ಇತ್ತೀಚೆಗೆ ಭಾರಿ ವೈರಲ್​ ಆಗಿತ್ತು.

ವಿಶ್ವದ ಅತ್ಯಂತ ಮೂರ್ಖ ಮತದಾರರು ಭಾರತದಿಂದ ಬಂದವರು. ಅವರು ಅಕ್ರಮ ವಲಸಿಗರನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವ ರಾಜಕೀಯ ಮುಖಂಡರಿಗೆ ಮತ ಹಾಕುತ್ತಾರೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್​ ಭಾರತದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಜೀನ್​ ಕ್ಲೌಡ್​ ಅವರು ಈ ರೀತಿಯ ಯಾವುದೇ ಪೋಸ್ಟ್​ ಮಾಡಿಲ್ಲ ಎಂಬುದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ.

ಫೇಸ್‌ಬುಕ್ ಬಳಕೆದಾರ ಯೋಗೇಂದ್ರ ಬಹದ್ದೂರ್ ಸಾಗರ್ ಮಿರ್ಜಾಪುರಿ ಎಂಬುವವರು ಅವರು ಜೀನ್ ಕ್ಲೌಡ್ ಜಂಕರ್ ಅವರ ಚಿತ್ರದ ಅವರು ಹೇಳಿರುವ ಹೇಳಿಕೆಯನ್ನು ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ನ ಮೂಲ ಯುರೋಪಿಯನ್ ಟೈಮ್ಸ್ ಎಂದು ಮಾಹಿತಿಯನ್ನು ನೀಡಿದ್ದರು.

ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಸ್ಟ್ ನಕಲಿ ಎಂಬುದನ್ನು ಪತ್ತೆ ಮಾಡಿದೆ.
ಜಂಕರ್ ಅವರ ಫೋಟೋದ ಬಗ್ಗೆ ಮಾಹಿತಿ ಹುಡುಕಿದಾಗ 2018ರ ಆಗಸ್ಟ್​ 30 ರಂದು ರಾಯಿಟರ್ಸ್​ ಛಾಯಾಗ್ರಾಹಕ ಆರಿಸ್​ ಒಕೊನೊಮೌ ತೆಗೆದದ್ದು ಎಂಬುದು ಪತ್ತೆಯಾಗಿದೆ.

ಬೆಲ್ಜಿಯಂನ ಜೆನ್ವಾಲ್‌ನಲ್ಲಿರುವ ಯುರೋಪಿಯನ್ ಕಮಿಷನ್ ಕಾಲೇಜಿನ ವಾರ್ಷಿಕ ಸೆಮಿನಾರ್‌ಗೆ ಜಂಕರ್ ಅಧ್ಯಕ್ಷತೆ ವಹಿಸಿದ್ದಾಗ ತೆಗೆದ ಫೋಟೋ ಅದಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಯುರೋಪಿಯನ್ ಕಮಿಷನ್​ (ಇಸಿ) ಮಾಜಿ ಅಧ್ಯಕ್ಷ ಜೀನ್​ ಕ್ಲೌಡ್​ ಜಂಕರ್​ ಅವರು ಭಾರತೀಯ ಮತದಾರರನ್ನು ಮೂರ್ಖರು ಎಂದು ಹೇಳಿದ್ದಾರೆ ಎನ್ನುವ ಪೋಸ್ಟ್​ ನಕಲಿ ಎಂಬುದು ಪತ್ತೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net