20 ಕೋಟಿಯಲ್ಲಿ 6 ಸೊನ್ನೆ!; ವೈರಲ್ ಆಯ್ತು ಬಿಜೆಪಿ ಸಂಸದರ ತಪ್ಪು ಹೇಳಿಕೆ

Untitled design - 2023-09-12T160343.779
Published on

ಉತ್ತರಪ್ರದೇಶ: ಸೆಪ್ಟೆಂಬರ್ 10 ರಂದು ಉತ್ತರ ಪ್ರದೇಶದ ಇಟಾವಾ ಕ್ಲಬ್ ಆವರಣದಲ್ಲಿ 30 ಯೋಜನೆಗಳನ್ನು ಉದ್ಘಾಟಿಸುವ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿತ್ತು. ಈ ಕಾರ್ಯಕ್ರಮದದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ರಾಮಶಂಕರ್ ಕಥೇರಿಯಾ ನೀಡಿದ ತಪ್ಪು ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಜಿತಿನ್ ಪ್ರಸಾದ್ ಆಗಮಿಸಿದ್ದರು. ಈ ವೇಳೆ 30 ಯೋಜನೆಗಳನ್ನು ಉದ್ಘಾಟಿಸಿ, ಅಡಿಪಾಯ ಹಾಕಿದ ಅವರು, ಬಿಜೆಪಿ ಸಂಸದ ರಾಮಶಂಕರ್ ಕಥೇರಿಯಾಗೆ ತಮಾಷೆಯಾಗಿ ಸವಾಲೊಂದನ್ನು ಹಾಕಿದರು.

ಕಥೇರಿಯಾ ಅವರು 20 ಕೋಟಿಗಳಲ್ಲಿ ಎಷ್ಟು ಸೊನ್ನೆಗಳಿವೆ ಎಂಬುದನ್ನು ಸರಿಯಾಗಿ ಊಹಿಸಿದರೆ, 200 ಕೋಟಿ ರೂ. ಮೌಲ್ಯದ ಯೋಜನೆಗಳ ಲಾಭವನ್ನು ಅವರಿಗೆ ನೀಡುವುದಾಗಿ ಹೇಳಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ, 20 ಕೋಟಿಗಳಲ್ಲಿ 6 ಸೊನ್ನೆಗಳಿವೆ ಎಂದು ಹೇಳಿದರು. ಈ ಹೇಳಿಕೆ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗಳನ್ನು ಹುಟ್ಟುಹಾಕಿತು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net