ನಿರ್ದೇಶನಕ್ಕಿಳಿದ ನಟಿ; ‘ದಿ ವೇಕೆಂಟ್ ಹೌಸ್’ಗೆ ಎಸ್ತರ್ ನರೋನ ಆ್ಯಕ್ಷನ್-ಕಟ್

esthor
Published on

ಬೆಂಗಳೂರು: ‘ಉಸಿರಿಗಿಂತ ನೀನೇ ಹತ್ತಿರ’ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಂಗಳೂರು ಹುಡುಗಿ ಎಸ್ತರ್ ನರೋನ. ಕರಾವಳಿಯ ಮೂಲದವರಾದರೂ ಎಸ್ತರ್ ಬೆಳೆದಿದ್ದು ಮುಂಬೈನಲ್ಲಿ.

ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ ಪ್ರವೇಶಿಸಿದ ಎಸ್ತರ್ ನಂತರ ತೆಲುಗು, ತುಳು ಚಿತ್ರಗಳಲ್ಲೂ ಮಿಂಚಿದ್ದಾರೆ. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅವರು, ಇದೀಗ ನಿರ್ದೇಶಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ದಿ ವೇಕೆಂಟ್ ಹೌಸ್’ ಚಿತ್ರವನ್ನು ಚೊಚ್ಚಲ ಬಾರಿಗೆ ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ನಿರ್ದೇಶಿಸುತ್ತಿದ್ದಾರೆ. ನಟನೆ, ನಿರ್ದೇಶನದ ಜತೆಗೆ ಎಸ್ತರ್ ಚಿತ್ರದ ನಿರ್ಮಾಣ, ಸಂಗೀತ, ಸಾಹಿತ್ಯ, ಕಥೆ, ಕಾಸ್ಟ್ಯೂಮ್… ಹೀಗೆ ಹಲವು ವಿಭಾಗಗಳಲ್ಲಿ ಜವಾಬ್ದಾರಿ ಹೊತ್ತಿದ್ದಾರೆ.

ಇತ್ತೀಚೆಗಷ್ಟೆ ಚಿತ್ರದ ಸ್ಟ್ ಲುಕ್ ರಿಲೀಸ್ ಆಗಿದ್ದು, ಎರಡು ಜೋಡಿಗಳ ಸುಂದರ ಪ್ರೇಮಕಥೆಯನ್ನು ಚಿತ್ರ ಒಳಗೊಂಡಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆಸಲಾಗಿದ್ದು ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. ಎಲ್ಲವೂ ಅಂದುಕೊಂಡಂತಾದರೆ ‘ದಿ ವೇಕೆಂಟ್ ಹೌಸ್’ ನವೆಂಬರ್‌ನಲ್ಲಿ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net