More

    ಜಡ್ಜ್​ ಪಾತ್ರದಲ್ಲಿ ದತ್ತಣ್ಣ ; ಕೋರ್ಟ್​ರೂಮ್​ ಡ್ರಾಮ “ಯಥಾಭವ’ ಟೀಸರ್​ ಬಿಡುಗಡೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಗೌತಮ್​ ಬಸವರಾಜು ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ “ಯಥಾಭವ’. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಟೀಸರ್​ ಬಿಡುಗಡೆ ಮಾಡಿದೆ. ನಿರ್ದೇಶಕ ಗೌತಮ್​ ಬಸವರಾಜು, “ಇದೊಂದು ಕೋರ್ಟ್​ರೂಮ್​ ಡ್ರಾಮ ಜಾನರ್​ ಚಿತ್ರ. ಕಳೆದ ವರ್ಷ ಹೈದರಾಬಾದ್​ನಲ್ಲಿ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡೆ. ನಂತರ 21 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದೆವು. ಚಿತ್ರದ ಶೇಕಡಾ 70ರಷ್ಟು ಭಾಗ ಕೋರ್ಟ್​ನಲ್ಲಿ ನಡೆಯುತ್ತದೆ. ಸದ್ಯ ಹೈದರಾಬಾದ್​ ಮತ್ತು ಮುಂಬೈನಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ : ಪೌಡರ್‌ನಲ್ಲಿ ಪೇಡಾ! ಸೆಟ್ಟೇರಿತು ನಟ ದಿಗಂತ್ ಹೊಸ ಚಿತ್ರ ‘ಪೌಡರ್’

    ಜಡ್ಜ್​ ಪಾತ್ರದಲ್ಲಿ ದತ್ತಣ್ಣ ; ಕೋರ್ಟ್​ರೂಮ್​ ಡ್ರಾಮ "ಯಥಾಭವ' ಟೀಸರ್​ ಬಿಡುಗಡೆ

    ನಂತರ ಹಿರಿಯ ನಟ ದತ್ತಣ್ಣ, “ಕನ್ನಡದಲ್ಲಿ ಈಗ ಹೊಸ ಪ್ರತಿಭೆಗಳ ಅನಾವರಣವಾಗುತ್ತಿದೆ. ಹೊಸ ಚಿತ್ರಗಳು ಗೆಲ್ಲುತ್ತಿವೆ. ನಾನು ಈ ಚಿತ್ರದಲ್ಲಿ ಜಡ್ಜ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಕುರಿತು ಓದಿಕೊಂಡಿರುವ ಈ ಚಿತ್ರತಂಡದ ಜತೆ ಕೆಲಸ ಮಾಡಿದ್ದು ಸಂತೋಷವಾಗಿದೆ’ ಎಂದು ಖುಷಿ ಹಂಚಿಕೊಂಡರು. ಬಾಲ ರಾಜವಾಡಿ, “ಈ ಚಿತ್ರದಲ್ಲಿ ಗೃಹ ಸಚಿವನ ಪಾತ್ರ ನನ್ನದು. ನಾಯಕಿಯ ತಂದೆಯೂ ಹೌದು’ ಎಂದರು.

    ಇದನ್ನೂ ಓದಿ : ಸಿಕ್ಸ್​ ಪ್ಯಾಕ್​ ಸುದೀಪ್​ ; 46ನೇ ಸಿನಿಮಾಗಾಗಿ ಕಿಚ್ಚನ ತಯಾರಿ

    ಜಡ್ಜ್​ ಪಾತ್ರದಲ್ಲಿ ದತ್ತಣ್ಣ ; ಕೋರ್ಟ್​ರೂಮ್​ ಡ್ರಾಮ "ಯಥಾಭವ' ಟೀಸರ್​ ಬಿಡುಗಡೆ

    ನಾಯಕ ಪವನ್​ ಶಂಕರ್​ಗೆ ಇದು ಮೊದಲ ಚಿತ್ರ. ನಾಯಕಿ ಸಹನಾ ಸುಧಾಕರ್​ ಇಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್​ಲೈನ್​ ಸುಧಾಕರ್​ ಪುತ್ರ ಗೌತಮ್​ ಸುಧಾಕರ್​ ಮುಖ್ಯ ಭೂಮಿಕೆಯಲ್ಲಿದ್ದು ಜತೆಗೆ ನೀನಾಸಂ ಆನಂದ್​, ಮಹೇಶ್​ ಕಲಿ, ಯಶಸ್ವಿನಿ ರವೀಂದ್ರ, ಮಾಸ್ಟರ್​ ಶಮಂತ್​ ತಾರಾಗಣದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts