ಸಖತ್​ ಐಡಿಯಾ ಗುರು| ಕ್ರೀಡಾ ಸಂಸ್ಥೆಗಳನ್ನು ಸ್ಥಾಪಿಸಿ

Co 3
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಕ್ರೀಡಾ ಸಂಸ್ಥೆಗಳನ್ನು ಸ್ಥಾಪಿಸಿ

ಬಂಡವಾಳ ಹೂಡಿಕೆಗೆ ಕ್ರೀಡಾಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಕಾರ್ಪೆರೇಟ್ ಸಂಸ್ಥೆಗಳು ಮಾತ್ರವಲ್ಲ, ಜಿಲ್ಲೆ, ತಾಲೂಕು ಮಟ್ಟದಲ್ಲಿರುವ ದಾನಿಗಳು ಕೂಡ ಕ್ರೀಡಾಸಂಸ್ಥೆಗಳನ್ನು ರಚಿಸಿಕೊಂಡು ಕ್ರೀಡಾಪಟುಗಳ ಪ್ರಾಯೋಜಕತ್ವ ವಹಿಸಿಕೊಂಡು ಬೆಳೆಸಲು ಅವಕಾಶವಿದೆ. ಕ್ರೀಡಾಪಟುಗಳ ಮೇಲೆ ನಂಬಿಕೆ ಇಟ್ಟು ಹಣ ಹೂಡಬೇಕಾಗುತ್ತದೆ. ತಕ್ಷಣಕ್ಕೆ ಲಾಭ ಬರದಿದ್ದರೂ ನಿಧಾನವಾಗಿ ಆರ್ಥಿಕ ಬಲ ಬರುತ್ತದೆ. ಕ್ರೀಡಾಸಂಸ್ಥೆ ರಚಿಸಿ ಒಂದೊಂದು ಜಿಲ್ಲೆಯ ಕ್ರೀಡಾಪಟುಗಳ ಪ್ರಾಯೋಜಕತ್ವ ವಹಿಸಿಕೊಳ್ಳಬೇಕು. ಇದರಿಂದ ಕ್ರೀಡಾಪಟುಗಳಿಗಷ್ಟೇ ಅಲ್ಲ, ಸಮುದಾಯ, ಜಿಲ್ಲೆ ಹಾಗೂ ದೇಶಕ್ಕೂ ಅನುಕೂಲವಾಗುತ್ತದೆ. ಕ್ರೀಡಾಪಟುವಿನ ಪ್ರತಿಭೆ ಗುರುತಿಸಿ, ಆತನ/ಅವಳ ಸಾಧನೆ ಗುರುತಿಸಿ ಉದ್ಯೋಗವನ್ನೂ ನೀಡಬಹುದು. ಗ್ರಾಮವೊಂದರಲ್ಲಿ ಉದ್ಯಮಿಯೊಬ್ಬ ಇದ್ದರೆ ಆತ ತನ್ನ ಕೈಲಾದಷ್ಟು ಶಾಲಾ ಮಟ್ಟದಲ್ಲೇ ಸಹಾಯ ಮಾಡಬಹುದು. ಕಾಪೋರೇಟ್ ವಲಯ ಕ್ರಿಕೆಟ್​ಗಷ್ಟೇ ಸೀಮಿತವಾಗಬಾರದು. ಗ್ರಾಮ ಹಾಗೂ ಜಿಲ್ಲಾ ಮಟ್ಟದಿಂದಲೇ ಇತರ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು. ಉತ್ತಮ ಕ್ರೀಡಾಪಟುಗಳು ಬೆಳೆದರಷ್ಟೇ ಕ್ರೀಡೆ ಅಭಿವೃದ್ಧಿಯಾಗಲು ಸಾಧ್ಯ. ಆಗ ತಂತಾನೆ ಹೂಡಿಕೆ-ಲಾಭ ಹರಿದು ಬರುತ್ತದೆ.

| ಅಶ್ವಿನಿ ನಾಚಪ್ಪ ಅಂತಾರಾಷ್ಟಿ್ರಯ ಖ್ಯಾತಿಯ ಅಥ್ಲೀಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net