VIDEO | ಬಿಗ್​​ ಬಾಸ್​ ಹೋಗೋಕೆ ಇಶಾನಿ ಖರ್ಚು ಮಾಡಿದ್ದು ಎಷ್ಟು ಲಕ್ಷ? ಕೇಳಿದ್ರೆ ಶಾಕ್​ ಆಗ್ತೀರಿ!

Untitled-design-81-1
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ 50 ದಿನಗಳನ್ನು ಪೂರೈಸಿ 100 ದಿನಗಳತ್ತ ಭರ್ಜರಿ ಓಟವನ್ನು ಮುಂದುವರೆಸಿದೆ. ಇದಕ್ಕೂ ಮುನ್ನ ಏಳನೇ ವಾರದಲ್ಲಿ ನಡೆದ ಡಬಲ್​ ಎಲಿಮಿನೇಷನ್​ ರೌಂಡ್​ ಪೈಕಿ ಮೊದಲಿಗೆ ಮನೆಯಿಂದ ಹೊರಬಂದ ಗಾಯಕಿ ಇಶಾನಿ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್​ ಮನೆಯೊಳಗಿನ ಬಿಗ್​ ವಿಚಾರಗಳನ್ನು ಬಹಿರಂಗವಾಗಿ ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಗ್ರೂಪಿಸಮ್ ಬಗ್ಗೆ ಮಾತನಾಡಿದ ಇಶಾನಿ, "ನನ್ನ ಪ್ರಕಾರ ಪ್ರಾರಂಭದಲ್ಲಿ ನನಗೇನೂ ಆ ರೀತಿ ಅನಿಸಲಿಲ್ಲ. ಯಾರು ಯಾರ ಜತೆ ಇರುತ್ತಾರೋ ಅದರ ಮೇಲೆ ಗುಂಪೊಂದು ರಚನೆಯಾಗಿತ್ತು. ಒಂದು ಕಡೆ ನಿಜಕ್ಕೂ ಕೆಟ್ಟ ಗ್ರೂಪಿಸಮ್​ ಇತ್ತು. ಅದನ್ನು ಸುದೀಪ್​ ಸರ್​ ಕೂಡ ಗಮನಿಸಿದ್ದರು. ನಾನು ವಿನಯ್​, ಸ್ನೇಹಿತ್​, ಮೈಕಲ್, ನಮ್ರತಾ ಅವರೊಂದಿಗೆ ಹೆಚ್ಚು ಬೆರೆತು ಮಾತನಾಡುತ್ತಿದ್ದೆ" ಎಂದರು.

ಇನ್ನು ಬಿಗ್​ ಬಾಸ್​ ಮನೆಯೊಳಗೆ ಹೋಗಲು ಬಟ್ಟೆ ಖರೀದಿ ಸೇರಿದಂತೆ ಇತರೆ ವಸ್ತುಗಳಿಗೆ ಖರ್ಚು ಮಾಡಿದ ಒಟ್ಟು ಹಣವೆಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದ ಇಶಾನಿ, "ಎಷ್ಟು ಖರ್ಚಾಗಿದೆ ಎಂಬುದು ನನಗೆ ತಿಳಿದಿಲ್ಲ, ಅದೆಲ್ಲಾ ನನ್ನ ತಂಡಕ್ಕೆ ಗೊತ್ತಿದೆ. ಆದ್ರೆ, ಒಟ್ಟಾರೆ ಎಂದರೆ".... ಮತ್ತಷ್ಟು ಇಂಟ್ರೆಸ್ಟಿಂಗ್​ ವಿಚಾರಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net