

ಬೆಂಗಳೂರು: ಆರನೇ ವಾರದಲ್ಲಿ ಬಿಗ್ ಬಾಸ್ ಮನೆಯೊಳಗೆ ನಡೆದ ಡಬಲ್ ಎಲಿಮಿನೇಷನ್ನಲ್ಲಿ ಹೊರಬಂದ ಗಾಯಕಿ ಇಶಾನಿ, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್ ಬಾಸ್ ಒಳಗೆ ಹೇಳಲಾಗದ ವಿಚಾರಗಳನ್ನು ಇದೀಗ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ಕಾರ್ತಿಕ್ ಮತ್ತು ಸಂಗೀತಾ ನಡುವೆ ಇರುವ ಸಂಬಂಧ ಸ್ನೇಹನಾ? ಪ್ರೀತಿನಾ? ಎಂಬ ಪ್ರಶ್ನೆಗೆ ತಮ್ಮ ಅನಿಸಿಕೆಯನ್ನು ಈ ರೀತಿ ವಿವರಿಸಿದ್ದಾರೆ.
ಮೊದಲಿಗೆ 'ನನಗೆ ಕಾಂಪಿಟೇಟರ್ ಅಲ್ಲ' ಎಂಬ ರಕ್ಷಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಇಶಾನಿ, "ಪರವಾಗಿಲ್ಲ ಟಾಸ್ಕ್ ಬಗ್ಗೆ ಅಥವಾ ಬೇರೆ ಯಾವುದೇ ವಿಚಾರವಾಗಿಯೇ ಇರಲಿ ನಾನು ಏನೂ ಹೇಳಲು ಹೋಗುವುದಿಲ್ಲ. ಅದು ಅವರ ಪ್ರಕಾರ ಹೇಳಿರುವುದು. ಅಲ್ಲಿ ಯಾರು ಕಾಂಪಿಟೇಶನ್, ಯಾರು ಅಲ್ಲ ಎಂಬುದು ನನಗೆ ತಿಳಿದಿದೆ" ಎಂದರು.
"ನನ್ನ ಪ್ರಕಾರ ಬಿಗ್ ಬಾಸ್ ಟಾಪ್ ಫೈನಲಿಸ್ಟ್ ಆಗಿ ಪ್ರತಾಪ್, ವಿನಯ್, ಕಾರ್ತಿಕ್, ಸಂಗೀತಾ ಮತ್ತು ಮೈಕಲ್ ಅಥವಾ ನಮ್ರತಾ ಇರುತ್ತಾರೆ. ಕಾರ್ತಿಕ್-ಸಂಗೀತಾ-ತನಿಷಾ ನಡುವೆ ಒಳ್ಳೆಯ ಸ್ನೇಹವಿದೆ. ಆದ್ರೆ, ಅದೇ ಸಮಯದಲ್ಲಿ ಅವರ ಮಧ್ಯೆ ಪದೇ ಪದೇ ಜಗಳವಾಗುತ್ತಿರುತ್ತದೆ" ಎಂದರು.
ಸಂಗೀತಾ ಮತ್ತು ಕಾರ್ತಿಕ್ ಒಳ್ಳೆ ಸ್ನೇಹಿತರಾಗಿಯೇ ಇದ್ದಾರೆ. ಇಬ್ಬರ ಮಧ್ಯೆ ಒಂದು ಸಾಫ್ಟ್ ಕಾರ್ನರ್ ಇದೆ ಎಂದು ಹೇಳಿದ ಇಶಾನಿ, ಮತ್ತಷ್ಟು ಕುತೂಹಲಕಾರಿ ಸಂಗತಿಗಳನ್ನು ಈ ಕೆಳಗಿನ ಸಂದರ್ಶನದ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ ವೀಕ್ಷಿಸಿ.