ಹಾಂಗ್ರೆೌ: ಉದಯೋನ್ಮುಖ ಶೂಟರ್ ಈಶಾ ಸಿಂಗ್, ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ (Manu Bhaker) ಅವರನ್ನು ಬದಿಗೊತ್ತುವ ಮೂಲಕ ಐಎಸ್ಎಸ್ಎಫ್ ವಿಶ್ವಕಪ್ನ (ISSF World Cup ) ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮನು ಭಾಕರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರೆ, ಭಾರತ ಒಂದೇ ವಿಭಾಗದಲ್ಲಿ ಅವಳಿ ಪದಕ ಬಾಚಿಕೊಂಡ ಸಾಧನೆ ಮಾಡಿತು.