

ಮೃತ್ಯುಂಜಯ ಕಪಗಲ್ ಬೆಂಗಳೂರು
ಪರಿಸರದ ಮೇಲೆ ದುಷ್ಪರಿಣಾಮ, ಕಾರ್ಯಕ್ಷಮತೆ ಕುಸಿತ ಹಾಗೂ ಉತ್ಪಾದನಾ ವೆಚ್ಚ ಅಧಿಕ ಎಂಬ ಕಾರಣಗಳನ್ನು ಮುಂದಿಟ್ಟು ಶಾಖೋತ್ಪನ್ನ ನೆಲೆಯ (ಥರ್ಮಲ್) ವಿದ್ಯುತ್ ಘಟಕಗಳನ್ನು ಮುಚ್ಚಬೇಕೆಂದು ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಪರ್ಯಾಯವಾಗಿ ಸೌರಶಕ್ತಿ ಆಧಾರಿತ (ಸೋಲಾರ್) ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿ ಖಾಸಗಿ ವಲಯಕ್ಕೆ ಉತ್ತೇಜನ ನೀಡಬೇಕೆಂಬ ಸಲಹೆಯನ್ನೂ ನೀಡಲಾಗಿದೆ.
ಎಸ್ಕಾಂಗಳ ಪ್ರಸ್ತಾವನೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ವನ್ನು ದಿಗ್ಭಾ›ಂತಿಗೊಳಿಸಿದ್ದು, ಖಾಸಗಿ ವಲಯಕ್ಕೆ ಸೋಲಾರ್ ಉತ್ಪಾದನೆ ಒಪ್ಪಿಸಬೇಕೆಂಬ ಸಲಹೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮೇ 4ರಂದು ನಡೆದ ಕೆಪಿಟಿಸಿಎಲ್ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದ್ದು, ಹಿರಿಯ ಅಧಿಕಾರಿಗಳ ಮಧ್ಯೆ ವಾಗ್ವಾದಕ್ಕೂ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ಥರ್ಮಲ್ ವಿದ್ಯುತ್ ಘಟಕಗಳು ಹೊರ ಚೆಲ್ಲುವ ಗಂಧಕಾಮ್ಲ ತಗ್ಗಿಸಲು ಪ್ಲಾಂಟ್ಗಳ ನಿರ್ಮಾಣ ಪೂರ್ವ ಪ್ರಕ್ರಿಯೆ, ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ಕ್ರಮಗಳು, ನವೀಕರಿಸುವ ಮೂಲಕ ಪ್ಲಾಂಟ್ಗಳ ಬಲವರ್ಧನೆ ಕೈಗೆತ್ತಿಕೊಳ್ಳಲಾಗಿದೆ. ಈ ಹಂತದಲ್ಲಿ ಪ್ಲಾಂಟ್ಗಳನ್ನು ಮುಚ್ಚಬೇಕೆಂಬ ಪ್ರಸ್ತಾವನೆ ಸಲ್ಲಿಕೆಯಾಗಿದ್ದಕ್ಕೆ ಕೆಪಿಸಿ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ. ಘಟಕಗಳನ್ನು ಮುಚ್ಚಬೇಕೆಂಬ ಪ್ರಸ್ತಾವನೆ ನಿಗಮದಲ್ಲಿ ಪ್ರತಿರೋಧದ ಕಿಡಿ ಹೊತ್ತಿಸಿದ್ದು, ಲಾಕ್ಡೌನ್ ಬಳಿಕ ಚಳವಳಿ ಭುಗಿಲೇಳುವ ಸಾಧ್ಯತೆಗಳಿವೆ.
ಇದನ್ನೂ ಓದಿ ಐಸಿಸಿಯಲ್ಲೂ ಶುರುವಾಗುತ್ತಾ ‘ದಾದಾ’ಗಿರಿ?
ವಿಸ್ತೃತ ವರದಿಗೆ ಸಿಎಂ ಸೂಚನೆ: ಹಿರಿಯ ಅಧಿಕಾರಿಗಳ ವಾದ ಸರಣಿಗೆ ಕಿವಿಗೊಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉತ್ಪಾದನಾ ವೆಚ್ಚವೂ ಒಳಗೊಂಡಂತೆ ಪ್ರಮುಖ ಅಂಶಗಳನ್ನು ಒಳಗೊಂಡ ಅಧ್ಯಯನಪೂರ್ಣ, ತುಲನಾತ್ಮಕ, ಸಾಧಕ-ಬಾಧಕ ಸೇರಿ ವಿಸõತ ವರದಿ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ ಎಸ್ಕಾಂಗಳಿಗೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಲ್ಲಿದ್ದಲು ಸಿಕ್ಕಿದರೆ ತಗ್ಗಲಿದೆ ಬೆಲೆ
ಕೇಂದ್ರದ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಮುತುವರ್ಜಿಯಿಂದ ಒಡಿಶಾ ಮತ್ತು ಛತ್ತಿಸಗಡ್ ಕಲ್ಲಿದ್ದಲು ಗಣಿ (ಕೋಲ್ ಬ್ಲಾಕ್) ಗಳು ಕೆಪಿಸಿಗೆ ಮಂಜೂರಾಗಿವೆ. ಸ್ವಾಧೀನ ಹಾಗೂ ಗಣಿಗಾರಿಕೆಗೆ ಅನುಮೋದನೆ ಪ್ರಕ್ರಿಯೆ ತ್ವರಿತವಾಗಿ ಮುಗಿಸಿದರೆ ಥರ್ಮಲ್ ಪ್ಲಾಂಟ್ಗಳಿಗೆ ಬೇಕಾದ ಕಲ್ಲಿದ್ದಲು ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ಈ ವ್ಯವಸ್ಥೆಯಾದರೆ ಶಾಖೋತ್ಪನ್ನ- 3.62 ರೂ.ಗಳಿಗೆ ಇಳಿಯಲಿದೆ.
ಕೆಪಿಸಿ ವಾದವೇನು?
ಸರ್ಕಾರದ ಹಿಡಿತ ತಪ್ಪಿದರೆ ಅಪಾಯ. ಕೆಪಿಸಿ ಅಸ್ತಿತ್ವಕ್ಕೆ ಧಕ್ಕೆ
ಥರ್ಮಲ್ ಪ್ಲಾಂಟ್ ದಿಢೀರ್ ಮುಚ್ಚಿದರೆ ಸಾವಿರಾರು ಉದ್ಯೋಗಿಗಳು ಬೀದಿಪಾಲು
ಸೋಲಾರ್ ಪರ್ಯಾಯ ವಾದರೆ ನಿಗಮಕ್ಕೆ ಅರ್ಧ ಪಾಲು ನೀಡುವುದು ಉತ್ತಮ
ಸೋಲಾರ್ ಕ್ಷೇತ್ರದ ಖಾಸಗಿ ಏಕಸ್ವಾಮ್ಯ ಸಾಧಿಸಿದರೆ ಭವಿಷ್ಯತ್ತಿನಲ್ಲಿ ಬೆಲೆ ದುಬಾರಿ
ಉಚಿತ ವಿದ್ಯುತ್ ಪೂರೈಕೆಯಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ದುರ್ಲಭ
ಥರ್ಮಲ್ ಪ್ಲಾಂಟ್ಗಳೆಲ್ಲ ಕಲ್ಯಾಣ ಕರ್ನಾಟಕದಲ್ಲಿದ್ದು, ಪ್ರಾಂತದ ಪ್ರಗತಿಗೆ ಪೂರಕ